188 ಎನ್ ಜಿಒಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ

ವಿದೇಶಿ ದೇಣಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ, ಉಗ್ರಗಾಮಿ ಚಟುವಟಿಕೆಗಳ ಜತೆಗೆ ಸಂಬಂಧ ಇಟ್ಟುಕೊಂಡಿರುವ ಹಾಗೂ ಮತಾಂತರ ಕಾರ್ಯದಲ್ಲಿ...
188 ಎನ್ ಜಿಒಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ

ನವದೆಹಲಿ: ವಿದೇಶಿ ದೇಣಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ, ಉಗ್ರಗಾಮಿ ಚಟುವಟಿಕೆಗಳ ಜತೆಗೆ ಸಂಬಂಧ ಇಟ್ಟುಕೊಂಡಿರುವ ಹಾಗೂ ಮತಾಂತರ ಕಾರ್ಯದಲ್ಲಿ ನಿರತವಾಗಿರುವ ಆರೋಪ ಎದುರಿಸುತ್ತಿರುವ 188 ಎನ್ಜಿಒಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರಧಾನಿ ನರೇಂದ್ರ್ ಮೋದಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಇಂಥ ಎನ್ಜಿಒಗಳ ಪಟ್ಟಿಯನ್ನು ಈಗಾಗಲೇ ಆಂತರಿಕ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿದ್ದು, ಈ ಕುರಿತ ವರದಿಯನ್ನು ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿವೆ. ವಿದೇಶಿ ನಿಧಿಗಳು ಹಾಗೂ ಹಣಕಾಸು ಅಕ್ರಮದ ಕುರಿತು ತನಿಖೆ ನಡೆಸುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಮತ್ತು ಜಾರಿ ನಿದೇಶನಾಲಯ(ಇಡಿ)ಕ್ಕೆ ಈ ಸಂಬಂಧ ಈಗಾಗಲೇ ಮಾಹಿತಿ ನೀಡಲಾಗಿದೆ.

ಆದರೆ, ಎಷ್ಟು ಎನ್ಜಿಒಗಳ ಮಾಹಿತಿಯನ್ನು ಸಿಬಿಟಿಡಿ ಮತ್ತು ಇಡಿಗೆ ವಹಿಸಲಾಗಿದೆ ಎಂಬ ಮಾಹಿತಿ ಇಲ್ಲ.

ಕಳೆದ ವರ್ಷ ನ.21ರಂದು ನಡೆದ ಸರ್ಕಾರದ ಆರ್ಥಿಖ ಗುಪ್ತಚರ ಸಮಿತಿ ಸಭೆಯಲ್ಲಿ ವಿದೇಶಿ ದೇಣಿಗೆ ದುರುಪಯೋಗ ಆಗುತ್ತಿರುವ ಕುರಿತು ಕಳವಳ ವ್ಯಕ್ತವಾಗಿತ್ತು. ಇಂಥ ಎನ್ಜಿಒಗಳ ನೋಂದಣಿ ರದ್ದು ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನು ಶಿಫಾರಸು ಮಾಡಲಾಗಿತ್ತು.

ಎಡಪಂಥೀಯ ಉಗ್ರ ಸಂಘಟನೆ ಜತೆಗೆ ಲಿಂಕ್


ಮೆಡಿಸನ್ ಸ್ಯಾನ್ಸ್ ಫ್ರಾಂಟಿಯರ್ಸ್ ಅಥವಾ ಡಾಕ್ರ್ ವಿದೌಂಟ್ ಬಾರ್ಡರ್ಸ್ ಎಡಪಂಥೀಯ ಉಗ್ರ ಜತೆಗೆ ಸಂಪರ್ಕ ಹೊಂದಿದ ಆರೋಪ ಇದೆ. ಈ ಎನ್ಜಿಒ ಹೆಸರು 2008, 2010 ಮತ್ತು 2013ರಲ್ಲ ಮೂರು ಬಾರಿ ಪ್ರಸ್ತಾಪವಾಗಿತ್ತು. ಈ ಸಂಘಟನೆ ಸೆಟಲೈಟ್ ಫೋನ್ ಅನ್ನೂ ಬಳಸುತ್ತಿರುವ ಆರೋಪ ಎದುರಿಸುತ್ತಿದೆ. ಈ ರೀತಿಯ ಫೋನ್ ಬಳಕೆಗೆ ಸರ್ಕಾರದ ಅನುಮತಿ ಇಲ್ಲ. ಇದಲ್ಲದೆ ವನವಾಸಿ ಚೇತ್ನಾ ಆಶ್ರಮ್, ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಫೌಂಡೇಶನ್ ಸೇರಿದಂತೆ ಇನ್ನೂ 11 ಎನ್ಜಿಒಗಳು ಎಡಪಂಥೀಯ ಉಗ್ರ ಸಂಘಟನೆಗಳ ಜತೆಗೆ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿವೆ.

  • ಅಮೆರಿಕ ಮೂಲದ ಮರ್ಸಿ ಕಾರ್ಪ್ಸ್ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಎನ್ಜಿಒಗಳಿಗೆ ಹಣಕಾಸು ನೆರವು ನೀಡುತ್ತಿದೆ
  • ತಮಿಳುನಾಡಿನ ಪೀಪಲ್ಸ್ ಎಜುಕೇಷನ್ ಮಕತ್ತು ಆ್ಯಕ್ಷನ್ ಫೊರ್ ಲಿಬರೇಷನ್ ಸೇರಿದಂತೆ 11 ಎನ್ಜಿಒಗಳು ಕೂಡಂಕುಳಂತ ಅಣು ಸ್ಥಾವರದ ವಿರುದ್ಧ ಆಂದೋಲನ ನಡೆಸಿದ ಆರೋಪ ಎದುರಿಸುತ್ತಿವೆ.
  • 50 ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಎನ್ಜಿಒಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com