
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಜಂಟಿಯಾಗಿ ನಡೆಸಿರುವ ರೆಡಿಯೋ ಭಾಷಣ ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಈ ಕುರಿತು ನರೇಂದ್ರ ಮೋದಿ ಅವರು, ಉಭಯ ದೇಶಗಳ ನಾಯಕರು ಕುಳಿತು ಮಾತನಾಡುತ್ತಿರುವ ಚಿತ್ರದೊಂದಿಗೆ ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದು, ರೆಕಾರ್ಡಿಂಗ್ ವೇಳೆ ನಮ್ಮ 'ಮನ್ ಕಿ ಬಾತ್ ಹಂಚಿಕೊಂಡಿದ್ದು' ಹೀಗೆ ಎಂದಿದ್ದಾರೆ. ಅಲ್ಲದೆ ರಾತ್ರಿ 8 ಗಂಟೆಗೆ 'ಮನ್ ಕಿ ಬಾತ್' ಪ್ರಸಾರವಾಗಲಿದೆ ಎಂದು ಹೇಳಿದ್ದಾರೆ.
ಮೋದಿ ಅವರು ಕಳೆದ ಆಕ್ಟೋಬರ್ ತಿಂಗಳನಿಂದ ಪ್ರತಿ ತಿಂಗಳು 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಪ್ರತಿಬಾರಿಗಿಂತ ಈ ಬಾರಿಯ ಕಾರ್ಯಕ್ರಮ ಸ್ವಲ್ಪ ದೊಡ್ಡದಾಗಿದ್ದು, ಸುಮಾರು 35 ನಿಮಿಷಗಳ ಕಾರ್ಯಕ್ರಮ ಇದಾಗಿದೆ.
ಮೋದಿ ಹಾಗೂ ಒಬಾಮ ಅವರ 'ಮನ್ ಕಿ ಬಾತ್' ಕಾರ್ಯಕ್ರಮ ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಸೇರಿದಂತೆ ಖಾಸಗಿ ರೇಡಿಯೋಗಳಲ್ಲೂ ಪ್ರಸಾರವಾಗಲಿದೆ. ಅಲ್ಲದೆ ಈ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಮರು ಪ್ರಸಾರವಾಗಲಿದೆ.
Advertisement