ಪದ್ಮಶ್ರೀ ತಿರಸ್ಕರಿಸಿದ ಚಿತ್ರಸಾಹಿತಿ ಸಲೀಂ ಖಾನ್

ಪ್ರಸಕ್ತ ವರ್ಷದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರು ಅಚ್ಚರಿಯ...
ಸಲೀಂ ಖಾನ್
ಸಲೀಂ ಖಾನ್

ಮುಂಬೈ: ಪ್ರಸಕ್ತ ವರ್ಷದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರು ಅಚ್ಚರಿಯ ಬೆಳವಣಿಗೆ ಎಂಬಂತೆ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿ ದ್ದಾರೆ. ಜತೆಗೆ, ನಾನು ಪದ್ಮಶ್ರೀಗಿಂತ ಉನ್ನತ ಪ್ರಶಸ್ತಿಗೆ ಅರ್ಹನಾದವನು ಎಂದೂ ಜನಪ್ರಿಯ ಚಿತ್ರ ಸಾಹಿತಿ ಸಲೀಂ ಖಾನ್ ಹೇಳಿಕೊಂಡಿದ್ದಾರೆ.
ಪದ್ಮಶ್ರೀಯನ್ನು ನಾನು ತಿರಸ್ಕರಿಸಿದ್ದೇನೆ ಎಂದು ಹೇಳುವುದು ಸರಿಯಾದ ಪದವಲ್ಲ. ಏಕೆಂದರೆ ನನಗೆ ಪ್ರಶಸ್ತಿಯ ಮೇಲೆ ಯಾವ ಕೋಪವೂ ಇಲ್ಲ. ಆದರೆ ಸುಮಾರು 40 ಸಿನಿಮಾಗಳಲ್ಲಿ, 55 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಾನು ಪದ್ಮಶ್ರೀಗಿಂತ ದೊಡ್ಡ ಪ್ರಶಸ್ತಿಗೆ ಅರ್ಹನಾದವನು. ನನಗಿಂತ ಕಿರಿಯರೇ ಎಷ್ಟೋ ವರ್ಷಗಳ ಹಿಂದೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ ಎಂದು ಸಲೀಂ ತಮ್ಮಅಸಮಾಧಾನವನ್ನು ಹೊರಹಾಕಿದ್ದಾರೆ.

ನಾನು ಮತ್ತು ಜಾವೇದ್ ಖಾನ್ ಒಟ್ಟಿಗೇ ಕೆಲಸ ಮಾಡಿದ್ದೇವೆ. 6  ಫಿಲಂ ಫೇರ್  ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇವೆ. ಆದರೆ ಜಾವೇದ್‍ಗೆ ಪದ್ಮಶ್ರೀ, ಪದ್ಮಭೂಷಣ
ನೀಡುವಾಗ ನನ್ನನ್ನು ಮರೆತೇ ಬಿಡಲಾಯಿತು ಎಂದಿದ್ದಾರೆ ಸಲೀಂ ಖಾನ್. ಇದೇ ವೇಳೆ, ಪದ್ಮ ತಿರಸ್ಕಾರಕ್ಕೂ ಮೋದಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಸಲೀಂ, ಮೋದಿ ಸಾಬ್ ಮತ್ತು ನಾನು ಅವರು ಪ್ರಧಾನಿಯಾಗುವ ಮುನ್ನವೇ ಒಳ್ಳೆಯ ಸಂಬಂಧ ಇಟ್ಟುಕೊಂಡವರು. ಆ ಸಂಬಂಧವು ಇವೆಲ್ಲದಕ್ಕಿಂತಲೂ ಮಿಗಿಲಾದದ್ದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com