ಒಬಾಮ ಭಾರತ ಭೇಟಿ ಅಂತ್ಯ, ಸೌದಿಗೆ ತೆರಳಿದ ಅಮೆರಿಕ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಮೂರು ದಿನಗಳ ಐತಿಹಾಸಿಕ ಭಾರತ ಭೇಟಿ ಮಂಗಳವಾರ ಮಧ್ಯಾಹ್ನ ಅಂತ್ಯಗೊಂಡಿದ್ದು, ಒಬಾಮ ದಂಪತಿ ಭಾರತದಿಂದ ಸೌದಿ ಅರೇಬಿಯಾಗೆ ತೆರಳಿದ್ದಾರೆ.
ಒಬಾಮ ದಂಪತಿ
ಒಬಾಮ ದಂಪತಿ

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಮೂರು ದಿನಗಳ ಐತಿಹಾಸಿಕ ಭಾರತ ಭೇಟಿ ಮಂಗಳವಾರ ಮಧ್ಯಾಹ್ನ ಅಂತ್ಯಗೊಂಡಿದ್ದು, ಒಬಾಮ ದಂಪತಿ ಭಾರತದಿಂದ ಸೌದಿ ಅರೇಬಿಯಾಗೆ ತೆರಳಿದ್ದಾರೆ.

ಇಂದು ಮಧ್ಯಾಹ್ನ ಪಾಲಂ ವಿಮಾನ ನಿಲ್ದಾಣದಲ್ಲಿ ಒಬಾಮ ದಂಪತಿ ಭಾರತೀಯರಿಗೆ ಮತ್ತೊಂದು ನಮಸ್ತೆ ಹೇಳುವ ಮೂಲಕ ಮಹತ್ವಪೂರ್ಣ ಮೂರು ದಿನಗಳ ಭಾರತ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ.

ಮಧ್ಯಾಹ್ನ 1.50ರ ಸುಮಾರಿಗೆ ತಮ್ಮ 'ಬೀಸ್ಟ್‌' ಕಾರಿನಲ್ಲಿ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಒಬಾಮ ದಂಪತಿ, ಏರ್‌ಫೋರ್ಸ್ ಒನ್ ವಿಮಾನದ ಮೂಲಕ ಸೌದಿಗೆ ತೆರಳಿದರು. ಸೌದಿ ಅರೇಬಿಯಾದಲ್ಲಿ ಮೃತ ಸೌದಿ ದೊರೆಯ ಸಂತಾಪ ಕಾರ್ಯಕ್ರಮದಲ್ಲಿ ಒಬಾಮ ಭಾಗವಹಿಸಲಿದ್ದಾರೆ.

ಬೆಳಗ್ಗೆ ಸಿರಿಪೋರ್ಟ್ ಆಡಿಟೋರಿಯಂನಲ್ಲಿ ವಿಶೇಷ ಆಹ್ವಾನಿತರನ್ನು ಉದ್ದೇಶಿಸಿ ಮಾತನಾಡಿದ್ದ ಒಬಾಮ, ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸಿದ್ದರು. ಅಲ್ಲದೆ ನನ್ನ ಈ ಭೇಟಿಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತುಷ್ಟು ವೃದ್ಧಿಯಾಗಲಿದೆ ಎಂದು ಹೇಳಿದ್ದರು.

ಭಾನುವಾರ ಭಾರತಕ್ಕೆ ಆಗಮಿಸಿದ್ದ ಒಬಾಮ ಹಾಗೂ ಅವರ ಪತ್ನಿ ಮಿಶೆಲ್ ಅವರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪಾಲಂ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಅಮೆರಿಕ ಅಧ್ಯಕ್ಷರಾಗಿ ಒಬಾಮ ಅವರು ನಿನ್ನೆ 66ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಪ್ರಧಾನಿ ಮೋದಿಗೆ ಒಬಾಮ ಧನ್ಯವಾದ
ಭಾರತ ಭೇಟಿಯನ್ನು ಅವಿಸ್ಮರಣೀಯಗೊಳಿಸಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರಿಗೆ ಧನ್ಯವಾದ ಎಂದು ವೈಟ್‌ಹೌಸ್ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com