ನಿಠಾರಿ ಹತ್ಯಾಕಾಂಡ: ಸುರೀಂದರ್ ಕೊಲಿ ಗಲ್ಲು ಶಿಕ್ಷೆ ಜೀವಾವಧಿಗೆ ಪರಿವರ್ತನೆ

ಸುರೀಂದರ್ ಕೋಲಿ
ಸುರೀಂದರ್ ಕೋಲಿ

ಅಲಹಾಬಾದ್: ನಿಠಾರಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ಅಮಾನವೀಯವಾಗಿ ಕೊಲೆ ಮಾಡುತ್ತಿದ್ದ ಹಂತಕ ಸುರೀಂದರ್ ಕೋಲಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಅಲಹಾಬಾದ್ ಹೈಕೋರ್ಟ್ ಪರಿವರ್ತಿಸಿ ಆದೇಶ ಹೊರಡಿಸಿದೆ.

ಪ್ರಕರಣ ಸಂಬಂಧ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸುರೀಂದರ್ ಕೋಲಿ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಕೋರ್ಟ್ ಮನವಿ ಸಲ್ಲಿಸಿದ್ದ. ಇಂದು ಕೋಲಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.

ಗಾಜಿಯಾಬಾದ್ ಸೆಷನ್ಸ್ ಕೋರ್ಟ್ ಆದೇಶದಂತೆ 42 ವರ್ಷದ ಅತ್ಯಾಚಾರಿ ಹಂತಕ ಕೋಲಿಯನ್ನು 2014ರ ಸೆಪ್ಟೆಂಬರ್ 12ರಂದೇ ಮೀರತ್ ಜೈಲಿನಲ್ಲಿ ಗೆಲ್ಲಿಗೇರಿಸಬೇಕಾಗಿತ್ತು. ಸೆ. 2 ರಂದು ಕೋಲಿಗೆ ಡೆತ್ ವಾರೆಂಟ್ ಜಾರಿಗೊಳಿಸಲಾಗಿತ್ತು. ಆದರೆ, ನಿಥಾರಿ ಸರಣಿ ಕೊಲೆ ಪಾತಕಿ ತೀರ್ಪನ್ನು ಪುನರ್ ಪರಿಶೀಲಿನೆ ಮನವಿಯನ್ನು ಸುಪ್ರೀಕೋರ್ಟ್ ಪುರಸ್ಕರಿಸಿ, ಅಕ್ಟೋಬರ್ 29, 2014ರ ತನಕ ಆತನ ಗಲ್ಲುಶಿಕ್ಷೆ ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿತ್ತು .

ಈ ನಡುವೆ ಕೋಲಿ ಅಲಹಾಬಾದ್ ಕೋರ್ಟಿಗೆ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿಗಳಾದ ಚಂದ್ರಚೂಡ ಹಾಗೂ ಪಿಕೆಎಸ್ ಬಗೇಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

2009ರಲ್ಲಿ ಪಂಧೇರ್ ಬಂಗಲೆಯಲ್ಲಿ ಕೋಲಿ ಸುಮಾರು 19 ಮಂದಿ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ನಂತರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಇದಲ್ಲದೆ ಮೃತ ಬಾಲಕಿಯರ ದೇಹವನ್ನು ಭಕ್ಷಿಸುವಷ್ಟು ಇತ ಕ್ರೂರಿಯಾಗಿದ್ದ.

ದೆಹಲಿಯ ಹೊರವಲಯದಲ್ಲಿರುವ ನೋಯ್ಡಾ ಪರಿಸರದ ನಿವಾಸಿಯಾಗಿದ್ದ ರಿಂಪಾ 2005ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು. 2006ರಲ್ಲಿ ಪಂಧೇರ್‌ನ ನಿವಾಸದ ಹಿಂದಿರುವ ಚರಂಡಿಯಲ್ಲಿ ಹಲವಾರು ಮಾನವ ಅವಶೇಷಗಳು ಪತ್ತೆಯಾದ ನಂತರ ಸರಣಿ ಕಗ್ಗೊಲೆ ಪ್ರಕರಣ ಬೆಳಕಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com