ಎಲ್ಲರಿಗೂ ಇಲ್ಲ ಸಬ್ಸಿಡಿ ಅನಿಲ

ಕೂತು ತಿನ್ನುವಷ್ಟು ಸಂಪಾದನೆ, ಸಂಪತ್ತಿದ್ದರೂ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ, ಅಡುಗೆ ಅನಿಲ ಸೌಲಭ್ಯ ಪಡೆಯುತ್ತಿರುವವರಿಗೆ...
ಅನಿಲ ಸಿಲಿಂಡರ್‍
ಅನಿಲ ಸಿಲಿಂಡರ್‍

ನವದೆಹಲಿ: ಕೂತು ತಿನ್ನುವಷ್ಟು ಸಂಪಾದನೆ, ಸಂಪತ್ತಿದ್ದರೂ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ, ಅಡುಗೆ ಅನಿಲ ಸೌಲಭ್ಯ ಪಡೆಯುತ್ತಿರುವವರಿಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಶಾಕ್ ನೀಡಲಿದೆ. ಅಡುಗೆ ಅನಿಲ, ಸೀಮೆಎಣ್ಣೆ  ಸಬ್ಸಿಡಿ ರೂಪದಲ್ಲಿ ದೇಶದ ಖಜಾನೆಗೆ ಪ್ರತಿ ವರ್ಷ ಆಗುತ್ತಿರುವ ಕೋಟ್ಯಂತರ ರುಪಾಯಿ ಸೋರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ಯೋಜನೆ ಹಾಕಿ ಕೊಂಡಿದೆ. ಯಾರಿಗೆ ನಿಜ ವಾಗಿಯೂ ಸಬ್ಸಿಡಿ ಆಧರಿತ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಬೇಕಿದೆ, ಯಾರಿಗೆ ಬೇಡ ಎಂಬುದನ್ನು ಗುರುತಿಸುವ ಕಾರ್ಯಕ್ಕೆ ಕೈ ಹಾಕಲು ಮುಂದಾಗಿದೆ. ಇದಕ್ಕಾಗಿ ಒಂದಷ್ಟು ಮಾನದಂಡಗಳನ್ನು ರೂಪಿ ಸಲೂ ಸಮಾಲೋಚನೆ ನಡೆಸುತ್ತಿದೆ. ಸದ್ಯ ಒಂದು ಅಡುಗೆ ಅನಿಲ ಸಿಲಿಂಡರ್‍ಗೆ ರು 300ರಿಂದ  ರು . 350ರ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಹಾಗಂತ ಈ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು  ಮಾಡು ವುದು ಸರ್ಕಾರದ ಗುರಿ ಅಲ್ಲ. ಅನರ್ಹರಿಗೂ ಸಬ್ಸಿಡಿ ನೀಡು ವುದರಲ್ಲಿ ಅರ್ಥವಿಲ್ಲ ಎನ್ನು ವುದು ಸರ್ಕಾರದ ಭಾವನೆ. ಹೀಗಾಗಿ ಸಬ್ಸಿಡಿ ಕಡಿತಕ್ಕೆ ಮುಂದಾಗಿದೆ.

10 ದಶಲಕ್ಷ ಮಂದಿ!
ಸರ್ಕಾರದ ಸದ್ಯದ ಅಂದಾಜಿನ ಪ್ರಕಾರ 10 ದಶಲಕ್ಷ ಗ್ರಾಹಕರನ್ನು ಸಬ್ಸಿಡಿ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿದೆ. ಇವರಿಗೆ ಸಬ್ಸಿಡಿ ಕಡಿತ ಮಾಡಿದರೆ ಪ್ರತಿ ವರ್ಷ ಅಡುಗೆ ಅನಿಲ ಸಿಲಿಂಡರ್‍ಗಾಗಿ ರು 4 ಸಾವಿರದಷ್ಟು ಹೆಚ್ಚುವರಿ ಹಣ ಪಾವತಿಸುವುದು ದೊಡ್ಡ ವಿಚಾರವೇನಲ್ಲ ಎಂಬುದು ಸರ್ಕಾರದ ಅಭಿಪ್ರಾಯ.
425
ಬೆಂಗಳೂರಿನಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ದರ
750
ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‍ನ ದರ 46,458 ಕೋಟಿ

ಎಲ್‍ಪಿಜಿ ಸಬ್ಸಿಡಿಗಾಗಿ 2013-14ರ ವೆಚ್ಚ
ಇಡೀ ದೇಶದಲ್ಲಿ ಕೇವಲ 17 ಸಾವಿರ ಮಂದಿ ಮಾತ್ರ ನಮಗೆ ಸಬ್ಸಿಡಿ ಸಿಲಿಂಡರ್ ಬೇಡ ಎಂದು ಬರೆದುಕೊಟ್ಟಿದ್ದಾರೆ



ಒಂದಷ್ಟು ಪ್ರಶ್ನೆಗಳು


ಅರ್ಹರನ್ನು ಗುರುತಿಸುವುದು ಹೇಗೆ?

  • ಈ ವಿಚಾರವಾಗಿ ಹಣಕಾಸು ಸಚಿವಾಲಯದ ಮುಂದೆ ಒಂದಷ್ಟು ಪ್ರಶ್ನೆಗಳಿವೆ. ಅವು ಹೀಗಿವೆ. ಯಾವ ವರ್ಗದ ಗ್ರಾಹಕರಿಗೆ ಸಬ್ಸಿಡಿಯ ಅಗತ್ಯವಿದೆ? ಪ್ರತಿ ತಿಂಗಳು ರು 4 ಸಾವಿರದಿಂದ ರು 5 ಸಾವಿರದ ವರೆಗೆ ಊಟ, ಉಪಹಾರಕ್ಕಾಗಿಯೇ ಹೋಟೆಲ್‍ಗೆ ಸುರಿಯುವ ಮೂರ್ನಾಲ್ಕು ಮಂದಿಯ ಕುಟುಂಬಕ್ಕೆ ಸಬ್ಸಿಡಿ ಬೇಕೇ?
  • ಒಂದು ವೇಳೆ ಕುಟುಂಬದಲ್ಲಿ ದುಡಿಯುವ ಸದಸ್ಯ ಶೇ.30ರಷ್ಟು ಆದಾಯ ತೆರಿಗೆ ಸ್ಲಾಬ್(ಅತಿ ಹೆಚ್ಚು ತೆರಿಗೆ ಪಾವತಿಸುವವರು)ನ ವ್ಯಾಪ್ತಿಗೆ ಬರುವವರಾದರೆ ಅಂಥ ಕುಟುಂಬಕ್ಕೆ ಸಬ್ಸಿಡಿ ಅಗತ್ಯವಿದೆಯೇ ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com