ಹುತಾತ್ಮ ಯೋಧರಿಗೆ ಭಾವಪೂರ್ಣ ವಿದಾಯ

ಕರ್ನಲ್ ಮುನೀಂದ್ರ ನಾಥ್ ರಾಯ್
ಕರ್ನಲ್ ಮುನೀಂದ್ರ ನಾಥ್ ರಾಯ್

ನವದೆಹಲಿ: ಗಣರಾಜ್ಯೋತ್ಸವ ದಿನದಂದು ಯುದ್ಧ ಸೇನಾ ಪದಕದ ಗೌರವ ಪಡೆದಿದ್ದ ಕರ್ನಲ್ ಮುನೀಂದ್ರ ನಾಥ್ ರಾಯ್ ಮತ್ತು ಸಂಜೀವ್ ಸಿಂಗ್ ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದ ಹುತಾತ್ಮ ಯೋಧರಿಗೆ ದೆಹಲಿಯಲ್ಲಿ ಭಾವಪೂರ್ಣ ವಿದಾಯ ಹೇಳಲಾಯಿತು.

ಹುತಾತ್ಮ ಕರ್ನಲ್ ಮುನೀಂದ್ರ ನಾಥ್ ರಾಯ್ ಹಾಗೂ ಸಂಜೀವ್ ಸಿಂಗ್'​ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವ ವಂದನೆ ನೆರವೇರಿಸಲಾಯಿತು. ಈ ವೇಳೆ, ಹುತಾತ್ಮರ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿತ್ತು. ಪತ್ನಿ, ಮಕ್ಕಳು ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.  ಸೇನೆಗಳಿಂದ ಗೌರವ ನಮನ ಸಲ್ಲಿಸಿದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯ್ತು..

ಮೊನ್ನೆ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಗುಂಡಿಗೆ ಈ ಇಬ್ಬರು ಯೋಧರು ಬಲಿಯಾಗಿದ್ದರು. 39 ವರ್ಷದ ಎಂಎನ್ ರಾಯ್ ಅವರು ಸಾಯುವ ಹಿಂದಿನ ದಿನವಷ್ಟೇ ಯುದ್ಧ ಸೇನಾ ಪದಕದ ಗೌರವ ಪಡೆದಿದ್ದರು.

"ಕರ್ನಲ್ ಎಂ.ಎನ್.ರಾಯ್ ಒಬ್ಬ ಅಪ್ರತಿಮ ಧೈರ್ಯಶಾಲಿ ಯೋಧರಾಗಿದ್ದರು. ನಾಯಕತ್ವಕ್ಕೆ ಅವರು ಮಾದರಿ ಎನಿಸುವಂತೆ ನಡೆದುಕೊಂಡಿದ್ದಾರೆ.." ಎಂದು ಸೇನಾ ಮುಖ್ಯಸ್ಥ ದಲಬೀರ್ ಸಿಂಗ್ ಸುಹಾಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com