
ವಾಷಿಂಗ್ಟನ್: ಶ್ವೇತ ಭವನದಲ್ಲಿ ನಿನ್ನ ತಲೆ ಕತ್ತರಿಸುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಇಸಿಸ್ ಉಗ್ರರು ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಇಸಿಸ್ ಉಗ್ರರು ಜನವರಿ 26ರಂದು ವಿಡಿಯೋವೊಂದನ್ನು ಪ್ರಕಟಿಸಿದ್ದು, ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತಭನಕ್ಕೆ ನುಗ್ಗಿ ನಿನ್ನ ತಲೆ ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ವಿಡಿಯೋದಲ್ಲಿ ಅಮೆರಿಕವನ್ನು ನಾವು ಮುಸ್ಲಿಂ ದೇಶವನ್ನಾಗಿ ಬದಲಾಯಿಸುತ್ತೇವೆ ಎಂದು ಕಪ್ಪು ಬಟ್ಟೆ ಧರಿಸಿರುವ ಇಸಿಸ್ ಉಗ್ರನೊಬ್ಬ ಹೇಳಿದ್ದು, ತನ್ನ ಕೈಯಲ್ಲಿ ಕುದಿಶ್ ಸೈನಿಕನೊಬ್ಬನನ್ನು ಮತ್ತು ಕತ್ತಿಯನ್ನು ಹಿಡಿದಿದ್ದಾನೆ. ಆ ಉಗ್ರ ಇರಾಕ್ ನ ಎರಡನೇ ಅತ್ಯಂತ ದೊಡ್ಡ ನಗರ ಮೊಸುಲ್ ಬೀದಿಗಳಲ್ಲಿ ನಿಂತು ಶ್ವೇತಭವನದಲ್ಲಿ ಒಬಾಮ ತಲೆ ಕತ್ತಿರಿಸುವುದಾಗಿ ಹೇಳುತ್ತಿದ್ದಾನೆ.
" ಓ ಒಬಾಮ... ನಾವು ಅಮೇರಿಕಾಕ್ಕೆ ಬರುತ್ತಿದ್ದೇವೆ. ವೈಟ್‌ಹೌಸ್'ನಲ್ಲಿ ನಿನ್ನ ತಲೆಯನ್ನ ಕತ್ತರಿಸುತ್ತೇವೆ. ಅಮೆರಿಕವನ್ನು ಮುಸ್ಲಿಂ ಪ್ರಾಂತ್ಯವನ್ನಾಗಿ ಪರಿವರ್ತಿಸುತ್ತೇವೆ", ಎಂದು ಈ ಉಗ್ರ ಎಚ್ಚರಿಕೆ ನೀಡಿದ್ದಾನೆ.
ಅಲ್ಲದೇ, ಫ್ರಾನ್ಸ್ ಮತ್ತು ಬೆಲ್ಜಿಯಂ ದೇಶಗಳಿಗೂ ಎಚ್ಚರಿಕೆ ನೀಡಿರುವ ಈ ಉಗ್ರ ಕಾರ್ ಬಾಂಬುಗಳು ಹಾಗೂ ಸ್ಫೋಟಕಗಳೊಂದಿಗೆ ನಿಮ್ಮ ದೇಶಕ್ಕೆ ಬರುತ್ತೇವೆ. ತಲೆಗಳನ್ನು ಕತ್ತರಿಸಿ ಹಾಕುತ್ತೇವೆ ಎಂದು ಹೇಳಿದ್ದಾನೆ. ಬಳಿಕ, ಪೈಶಾಚಿಕವಾಗಿ ಕುರ್ದಿಶ್ ಸೈನಿಕನ ತಲೆಯನ್ನು ಚಾಕುವಿನಿಂದ ಕತ್ತರಿಸಿ ಬಿಸಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Advertisement