ಮೊದಲ ಸಾರಿಗೆ ವಿಮಾನ `ಡಕೋಟಾ' ಕಲಬುರಗಿಯಲ್ಲಿ ಲ್ಯಾಂಡ್!

ಜಿ.ಡಿ. ಬಿರ್ಲಾ ಕುಟುಂಬ ಉಪಯೋಗಿ ಸುತ್ತಿದ್ದ 1946ರಲ್ಲಿ ನಿರ್ಮಾಣವಾಗಿದ್ದ ಮೊದಲ ಸಾರಿಗೆ ವಿಮಾನ ಎಂಬ ಖ್ಯಾತಿಗೆ ಪಾತ್ರವಾಗಿದ್ದ ...
ಡಕೋಟಾ ಏರ್‍ಕ್ರಾಫ್ಟ್
ಡಕೋಟಾ ಏರ್‍ಕ್ರಾಫ್ಟ್
Updated on

ಭೋಪಾಲ್: ಜಿ.ಡಿ. ಬಿರ್ಲಾ ಕುಟುಂಬ ಉಪಯೋಗಿ ಸುತ್ತಿದ್ದ 1946ರಲ್ಲಿ ನಿರ್ಮಾಣವಾಗಿದ್ದ ಮೊದಲ ಸಾರಿಗೆ ವಿಮಾನ ಎಂಬ ಖ್ಯಾತಿಗೆ ಪಾತ್ರವಾಗಿದ್ದ `ಡಕೋಟಾ ವಿಮಾನ' ಇದೀಗ ಕರ್ನಾಟಕದ ಕಲಬುರಗಿಯಲ್ಲಿ ಲ್ಯಾಂಡ್ ಆಗಲಿದೆ. ಅಂದಹಾಗೆ ಇದು ಇಡಿಯಾಗಿ ಅಲ್ಲ. ಬಿಡಿಬಿಡಿಯಾಗಿ!
ಪಾಕ್ ವಿರುದ್ಧ ಯುದ್ಧದಲ್ಲಿ ಯಶಸ್ವಿಯಾಗಿ ಬಳಕೆಯಾಗಿದ್ದ ಡಕೋಟಾ ಏರ್‍ಕ್ರಾಫ್ಟ್   ಇದೀಗ ತನ್ನ ನೌಕರರ ವೇತನ ನೀಡುವ ಸಲುವಾಗಿ ಬಿಡಿ ಬಿಡಿಯಾಗಿ ಕಳಚಿಕೊಳ್ಳಲಿದೆ. ಈ ಮೂಲಕ ಇತಿಹಾಸದ ಪುಟವನ್ನು ಸೇರಿಕೊಳ್ಳಲಿದೆ.

ಬಿರ್ಲಾ ಗ್ರೂಪ್ ಒಡೆತನದಲ್ಲಿತ್ತು
ಈ ವಿಮಾನದ ಉಪಯೋಗವನ್ನು ಬಿ.ಕೆ. ಬಿರ್ಲಾ ಗ್ರೂಪ್ ಹಾಗೂ ಉದ್ಯಮಿ ಜಿ.ಡಿ. ಬಿರ್ಲಾ ಕುಟುಂಬದವರೂ ಬಳಸಿದ್ದರು. ಬಳಿಕ ಭಾರತ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‍ನ (ಬಿಸಿಐ) ಒಡೆತನದಲ್ಲಿತ್ತು. ಆರ್ಥಿಕ ನಷ್ಟದಿಂದ ಕಂಪನಿ 2000ದಲ್ಲಿ ಮುಚ್ಚಲಾಗಿತ್ತು. ಪ್ರಸ್ತುತ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಕಾರ್ಯನಿರ್ವಹಿಸದೇ ಇರುವ ಈ ವಿಮಾನ ಇರಿಸಲಾಗಿದೆ. ಮಧ್ಯಪ್ರದೇಶದ ಹೈಕೋರ್ಟ್ ಆದೇಶದಂತೆ ಬಿಸಿಐನ ನೌಕರರಿಗೆ ವೇತನ ನೀಡುವ ಸಲುವಾಗಿ ವಿಮಾನ ಒಡೆಯುವ ಕೆಲಸ ಪ್ರಾರಂಭವಾಗಿದೆ. ನಂತರ ಕಲಬುರಗಿಯಲ್ಲಿರುವ ಕೆಸೋ ರಾಮ್  ಸಿಮೆಂಟ್ ಕಾರ್ಖಾನೆಗೆ ತರಲಾಗುವುದು.

 ಬಾಂಗ್ಲಾಕ್ಕೂ ಉಡುಗೊರೆ
2014ರ ಸೆಪ್ಟೆಂಬರ್ 18ರಂದು ಭಾರತೀಯ ವಾಯುಸೇನೆಯು ತನ್ನ ಮ್ಯೂಸಿಯಂನಲ್ಲಿಟ್ಟಿದ್ದ ಹಳೆಯ ಡಕೋಟಾ ಏರ್‍ಕ್ರಾಫ್ಟ್ ಬಾಂಗ್ಲಾದೇಶದ ವಾಯುಸೇನೆಗೆ ಉಡುಗೊರೆಯಾಗಿ ನೀಡಿತ್ತು.

 ಲೇಹ್‍ನಲ್ಲಿ ಇಳಿದಿತ್ತು
ಮೊದಲ ಸಾರಿಗೆ ವಿಮಾನವಾದ ಇದನ್ನು 1947-48ರ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಮೆಹರ್ ಸಿಂಗ್ ಅವರು ಈ ಡಕೋಟಾ ವಿಮಾನವನ್ನು ಲೇಹ್‍ನಲ್ಲಿ 11,500 ಅಡಿ ಎತ್ತರಕ್ಕೆ ಹಾರಿಸಿ ಇಳಿಸಿದಪ್ರಥಮ ವ್ಯಕ್ತಿ


ಬಿಡಿಬಿಡಿಯಾಗಿ  ಕರ್ನಾಟಕಕ್ಕೆ ಬರುತ್ತೆ
ಡಕೋಟಾ ಏರ್‍ಕ್ರಾಫ್ಟ್  ತನ್ನ ಕೊನೆಯ ಹಾರಾಟವನ್ನು 1990ರಲ್ಲಿ ನಡೆಸಿತ್ತು. ಬಳಿಕ ಇದನ್ನು ಮಧ್ಯಪ್ರದೇಶದ ಉಜ್ಜೈನಿಯ ನಾಗ್ಡಾ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಈ ನಡುವೆ ನೌಕರರು ವೇತನ ನೀಡದ ಬಿಸಿಐ ವಿರುದ್ಧ ಮಧ್ಯಪ್ರದೇಶ ಹೈಕೋರ್ಟಲ್ಲಿ ಕೇಸು ಹಾಕಿದ್ದರು. ವಿಚಾರಣೆ ನಡೆಸಿದ ಕೋರ್ಟ್ ವಿಮಾನವನ್ನು ಹರಾಜು ಹಾಕುವಂತೆ ಆದೇಶ ನೀಡಿತ್ತು. ವಿಮಾನವನ್ನು ಪಶ್ಚಿಮ ಬಂಗಾಳ ಮೂಲದ ಕಂಪನಿಯೊಂದು  ಎರಡು ವರ್ಷದ ಹಿಂದೆ ಹರಾಜು ಪ್ರಕ್ರಿಯಲ್ಲಿ ಖರೀದಿಸಿತ್ತು. ಇದೀಗ ಡಕೋಟಾ ಏರ್‍ಕ್ರಾಫ್ಟ್ ನ ಎಂಜಿನಿಯರ್‍ಗಳು ನಾಗ್ಡಾಕ್ಕೆ ಬಂದಿದ್ದು, ವಿಮಾನ ಭಾಗಗಳನ್ನು ವಿಂಗಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಳಿಕ ಇವುಗಳನ್ನು ಕಲಬುರಗಿಯಲ್ಲಿರುವ ಸಿಮೆಂಟ್ ಕಾರ್ಖಾನೆಗೆ ತರಲಾಗುವುದು.

ವಿಶೇಷವೇನು?
ಭಾರತೀಯ ವಾಯುಸೇನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 1947-48ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ವಿರುದ್ಧ ನಡೆದ ಯುದ್ಧದಲ್ಲಿ ಬಳಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com