
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಅವರು ರಾಹುಲ್ ವಿರುದ್ಧ ಅಸಮಾಧಾನಗೊಂಡಿದ್ದು, ಪಕ್ಷದಿಂದ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಶುಕ್ರವಾರ ಜಯಂತಿ ನಟರಾಜನ್ ಅವರು ಪತ್ರಿಕಾಗೋಷ್ಠಿ ನಡಸಲಿದ್ದು, ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದಲ್ಲಿ ತನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಯಂತಿ ನಟರಾಜನ್ ಸೊನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ರಾಹುಲ್ ಗಾಂಧಿ ಆಪ್ತರು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವುದಲ್ಲದೇ, ಮಾಧ್ಯಮಗಳಿಗೇ ಇಲ್ಲದ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಜಯಂತಿ ನಟರಾಜನ್ ಪತ್ರದಲ್ಲಿ ತಿಳಿಸಿದ್ದಾರೆ.
ಯುಪಿಎ ಸರ್ಕಾರದಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಜಯಂತಿ ನಟರಾಜನ್ ಪರಿಸರ ಪರವಾನಗಿ ನೀಡಲು ಕಿಕ್ ಬ್ಯಾಕ್ ಪಡೆಯುತ್ತಾರೆ ಎಂಬು ಆರೋಪ ಕೇಳಿಬಂದಿತ್ತು.
ಲೋಕಸಭಾ ಚುನಾವಣೆ ಸಂದರ್ಭಧಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಜಯಂತಿ ರಾಜನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಒತ್ತಾಯ ಪೂರ್ವಕವಾಗಿ ನನ್ನಿಂದ ರಾಜಿನಾಮೆ ನೀಡಿಸಿದ್ದು, ಪಕ್ಷದ ನಾಯಕರಿಂದಲೇ ಸಂಕಷ್ಟ ಎದುರಿಸುದ್ದೇನೆ ಎಂದು ಜಯಂತಿ ಹೇಳಿಕೊಂಡಿದ್ದಾರಂತೆ.
Advertisement