ಭಾರತದ ನೆಲಕ್ಕೂ ವಿಸ್ತಾರ ಇಸಿಸ್ 'ಖುರಸನ್'

ಇರಾಕ್, ಸಿರಿಯಾದಲ್ಲಿ ತಮ್ಮ ಕಬಂಧ ಬಾಹುಗಳನ್ನು ಚಾಚಿರುವ ಇಸಿಸ್ ಉಗ್ರ ಸಂಘಟನೆ ಭಾರತಕ್ಕೆ ಕಾಲಿಡುವ ಸಮಯ ...
ಖುರಸನ್
ಖುರಸನ್
Updated on

ನವದೆಹಲಿ: ಇರಾಕ್, ಸಿರಿಯಾದಲ್ಲಿ ತಮ್ಮ ಕಬಂಧ ಬಾಹುಗಳನ್ನು ಚಾಚಿರುವ ಇಸಿಸ್ ಉಗ್ರ ಸಂಘಟನೆ ಭಾರತಕ್ಕೆ ಕಾಲಿಡುವ ಸಮಯ ದೂರವಿಲ್ಲ. ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಕೆಲ ಪ್ರದೇಶಗಳಲ್ಲಿ ತನ್ನ ಸಂಘಟನೆಯನ್ನು ವಿಸ್ತರಿಸಲು ಇಸಿಸ್ ಎಲ್ಲ ಸಿದ್ಧ ತೆ ನಡೆಸಿದ್ದು, ಈ ಪ್ರದೇಶಗಳ ಕಾರ್ಯಾಚರಣೆಗೆ `ಖುರಸನ್' ಎಂಬ ಹೆಸರನ್ನೂ ಇಟ್ಟಿದೆ. ಅಷ್ಟೇ ಅಲ್ಲ, ಪಾಕಿಸ್ತಾನಿ ತಾಲಿಬಾನ್ ಕಮಾಂಡರ್ ಆಗಿದ್ದ ಉಗ್ರ ಹಫೀಜ್ ಸಯೀದ್ ಖಾನ್(42)ನನ್ನು ಖುರಸನ್‍ನ ಮುಖ್ಯಸ್ಥ(ವಲಿ) ಎಂದು ಘೋಷಿಸಿದೆ. ಭಾರತದಲ್ಲಿ ತನ್ನ ಘಟಕ ಸ್ಥಾಪಿಸಿರುವುದಾಗಿ ಅಲ್‍ಖೈದಾ ಉಗ್ರ ಸಂಘಟನೆಯು ಘೋಷಿಸಿದ 4 ತಿಂಗಳಲ್ಲೇ ಈ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಈಗ ಅಲ್‍ಖೈದಾ ಹಾಗೂ ಇಸಿಸ್ ಕೈಜೋಡಿ ಸಿದ್ದು, ಜಂಟಿಯಾಗಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿರುವುದು ವಿಶ್ವಾದ್ಯಂತ ಭಯದ ವಾತಾವರಣ ಸೃಷ್ಟಿಸಿದೆ. ಇದೇ ವೇಳೆ, ಮಹಾರಾಷ್ಟ್ರದ ಕಲ್ಯಾಣ್‍ನ 4 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಹಲವು ಯುವಕರನ್ನು ಇಂಟರ್ನೆಟ್ ಮೂಲಕ ಇಸಿಸ್ ನೇಮಕ ಮÁಡಿರುವ ಹಿನ್ನೆಲೆಯಲ್ಲಿ ಹೊಸ ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣಿಡುವಂತೆ ಭಾರತೀಯ ಅಧಿಕಾರಿಗಳಿಗೆ ಭದ್ರತಾ ವಿಶ್ಲೇಷಕರು ಸಲಹೆ ನೀಡಿದ್ದಾರೆ.

ಅದ್ನಾನಿಯ ಸಂದೇಶವೇನು?: ಖುರಸನ್‍ನ ನಾಯಕನಾಗಿ ನೇಮಕಗೊಂಡಿರುವ ಉಗ್ರ ಅದ್ನಾನಿಯು ಇಸಿಸ್ ವಿಸ್ತರಣೆ ಬಗೆಗಿನ ವಿಡಿಯೂ  ಸಂದೇಶವನ್ನು
ಕಳುಹಿಸಿದ್ದಾನೆ. `ಮುಜಾಹಿದೀನ್‍ಗಳಿಗೆ ನಾವು ಸಿಹಿ ಸುದ್ದಿಯನ್ನು ತಂದಿದ್ದೇವೆ. ಖುರಸನ್(ಆಫ್ಘಾನ್, ಪಾಕಿಸ್ತಾನ ಮತ್ತು ಭಾರತದ ಭಾಗಗಳಲ್ಲಿ) ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ವಿಸ್ತರಣೆಯಾಗುತ್ತಿದೆ. ಎಲ್ಲ ಮುಜಾಹಿದೀನ್‍ಗಳೂ `ಖಲೀಫಾ' ತಂಡಕ್ಕೆ ಸೇರ್ಪಡೆಗೊಳ್ಳಿ. ನಿಮ್ಮೊಳಗಿನ ವಿಭಜನೆ ಬಿಟ್ಟು ಒಗ್ಗಟ್ಟು ತೋರಿಸಿ. ಬಹುದೇವೋಪಾಸನೆಯನ್ನು ನಿರ್ಮೂಲನೆ ಮಾಡಿ ಏಕದೇವೋಪಾಸನೆಯನ್ನು ಜಾರಿಗೆ ತನ್ನಿ' ಎಂದು ಸಂದೇಶದಲ್ಲಿ ಹೇಳಲಾಗಿದೆ. ತಾಲಿಬಾನ್ `ಉಗ್ರ'ವಲ್ಲ!: ಆಫ್ಘಾ ನ್ ತಾಲಿಬಾನ್ ಉಗ್ರ ಸಂಘಟನೆಯಲ್ಲ, ಅದು `ಸಶಸ್ತ್ರ  ದಂಗೆ'ಯಷ್ಟೆ. ಆದರೆ, ಇಸಿಸ್ ಮಾತ್ರ `ಉಗ್ರ ಸಂಘಟನೆ'. ಎರಡು ಪ್ರಮುಖ ಭಯೋತ್ಪಾದನಾ ಸಂಘಟನೆಗಳಿಗೆ ಇಂತಹುದೊಂದು
ವ್ಯಾಖ್ಯಾನ ನೀಡಿದ್ದು ಬೇರ್ಯಾರೂ ಅಲ್ಲ. ಅಮೆರಿಕ. ಈ ಮೂಲಕ ವಿಶ್ವದ ಸಿರಿವಂತ ರಾಷ್ಟ್ರವು ಹೊಸ ವಿವಾದ ಸೃಷ್ಟಿಸಿದೆ. ತಾಲಿಬಾನ್ ಉಗ್ರ ಸಂಘಟನೆ ಅಲ್ಲ. ಅದು ಸಶಸ್ತ್ರ ದಂಗೆ. ಇಸಿಸ್ ಮಾತ್ರ ಭಯೋತ್ಪಾದನಾ ಸಂಘಟನೆ. ಹಾಗಾಗಿ ನಾವು ಉಗ್ರರಿಗೆ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಶ್ವೇತಭವನದ ವಕ್ತಾರ ಎರಿಕ್ ಶುಲ್ಝ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com