ಜೈಶಂಕರ್ ನೇಮಕದಲ್ಲಿ ರಾಜಕೀಯವಿಲ್ಲ: ಸುಷ್ಮಾ ಸ್ವಾರಾಜ್

ಭಾರತ ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಿಲ್ಲ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ: ಭಾರತ ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಹೇಳಿದ್ದಾರೆ.

ಜೈ ಶಂಕರ್ ಅವರನ್ನು ನೇಮಕ ಮಾಡುವುದಕ್ಕೂ ಮೊದಲೇ ಸುಜಾತ ಸಿಂಗ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೆ. ಈ ವೇಳೆ  ಅಮೆರಿಕ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೈ ಶಂಕರ್ ಅವರು ಇದೇ ತಿಂಗಳ ಜ. 31 ರಂದು ತಮ್ಮ ಹುದ್ದೆಗೆ ನಿವೃತ್ತಿ ಹೊಂದಿತ್ತಿರುವುದರಿಂದ ಅವರನ್ನು ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವಿಚಾರವನ್ನು ಸುಜಾತ ಸಿಂಗ್ ಅವರಿಗೆ ಮೊದಲೇ ತಿಳಿಸಿದ್ದೆ ಎಂದು ಸುಷ್ಮಾ ತಿಳಿಸಿದ್ದಾರೆ.

ಭಾರತ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಜಾತಾ ಸಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಅಮೆರಿಕದ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಜೈಶಂಕರ್ ಅವರು ನಿನ್ನೆಯಷ್ಟೇ ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ನಿನ್ನೆ ಜೈ ಶಂಕರ್ ಅವರು ತಮ್ಮ ಅಧಿಕಾರವನ್ನು ಸ್ವೀಕಾರ ಮಾಡಿದ್ದರು.

ಸರ್ಕಾರ ಈ ನಿಲುವಿಗೆ ದೇಶಾದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತಲ್ಲದೇ, ಒಬಾಮಾ ಭಾರತಕ್ಕೆ ಬರಲು ಜೈ ಶಂಕರ್ ಅವರು ಒಂದು ರೀತಿಯ ಕಾರಣವಾಗಿದ್ದಾರೆ. ಸುಜಾತಾ ಸಿಂಗ್ ಅವರು ಯುಪಿಎ ಸರ್ಕಾರ ಅವಧಿಯಲ್ಲಿ ಅಧಿಕಾರಕ್ಕೆ ಬಂದಿರುವ ಕಾರಣಕ್ಕೆ ಸುಜಾತಾ ಸಿಂಗ್ ಅವರ ಸ್ಥಾನಕ್ಕೆ ಜೈಶಂಕರ್ ಅವರನ್ನು ತರಲಾಗಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಗಣರಾಜ್ಯೋತ್ಸವಕ್ಕೆ ಒಬಾಮಾ ಅವರು ಭಾರತಕ್ಕೆ ಬಂದ ನಂತರ ಬಿಜೆಪಿ ಇದ್ದಕ್ಕಿದ್ದಂತೆ ಸಭೆ ನಡೆಸಿ ಜೈ ಶಂಕರ್ ಅವರನ್ನು ನೇಮಕ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com