
ಬೆಂಗಳೂರು: ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾ. ಎಸ್.ಆರ್.ನಾಯಕ್ ಅವರ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ರಾಜ್ಯ ಕಾನೂನು ಆಯೋಗಕ್ಕೆ ಅಧ್ಯಕ್ಷರಾಗಿರುವ ನ್ಯಾ.ಎಸ್.ಆರ್.ನಾಯಕ್ ಅವರ ನೇಮಕ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಎಚ್.ಎಂ.ಫಾರೂಕ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ನ್ಯಾ.ಕೆ.ಎಲ್.ಮಂಜುನಾಥ್ ಹಾಗೂ ನ್ಯಾ. ಸುಜಾತಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಈ ಹಿಂದೆ ನ್ಯಾ.ಎಸ್.ಆರ್.ನಾಯಕ್ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಜು.2007ರಿಂದ ಜು.2012ರ ವರೆಗೂ ಕಾರ್ಯನಿರ್ವಹಿಸಿದ್ದರು. ನಂತರ ಅವರನ್ನು ಕಾನೂನು ಆಯೋಗದ ಅಧ್ಯಕ್ಷಾರಾಗಿ ನೇಮಕ ಮಾಡಲಾಗಿದೆ. ಆದರೆ, ಮಾನವ ಹಕ್ಕು ರಕ್ಷಣೆ ಮುಖ್ಯಸ್ಥರ ಹುದ್ದೆ ಅಲಂಕರಿಸಲು ಅರ್ಹರಲ್ಲ ಎಂದಿದೆ. ಆದರೆ ನ್ಯಾ.ಎಸ್.ಆರ್.ನಾಯಕ್ ಅವರನ್ನು ಕಾನೂನು ಇಲಾಖೆ ಕಾರ್ಯದರ್ಶಿ, ಕಾನೂನು ಆಂುÉೂೀಗದ ಅಧ್ಯಕ್ಷರನ್ನಾಗಿ ಕಾನೂನು ಬಾಹಿರವಾಗಿ ನೇಮಕ ಮಾಡಿದ್ದಾರೆಂದು ಆರೋಪಿಸಿದ್ದರು.
ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, ಕಾನೂನು ಆಯೋಗ ಎಂಬುದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ಸರ್ಕಾರದ ಅಡಿ ಬರುವುದಿಲ್ಲ. ಅಲ್ಲದೇ ಮುಖ್ಯಸ್ಥರ ಹುದ್ದೆಯನ್ನು ಸರ್ಕಾರದ ಹುದ್ದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಇವರ ನೇಮಕ ಕಾನೂನು ಬಾಹಿರವಲ್ಲ ಎಂದು ವಾದಿಸಿದರು.
Advertisement