ಏರ್‌ಏಷ್ಯಾ
ಏರ್‌ಏಷ್ಯಾ

ಏರ್‌ಏಷ್ಯಾ: ಸಂಪರ್ಕ ಕಡಿತಕ್ಕೂ ಮುನ್ನ ಸೀಟ್‌ನಿಂದ ಎದ್ದುಹೋಗಿದ್ದ ಪೈಲಟ್..!

ಜಕಾರ್ತ: ಇತ್ತೀಚೆಗೆ ದುರಂತಕ್ಕೀಡಾಗಿದ್ದ ಏರ್‌ಏಷ್ಯಾ ವಿಮಾನದ ತನಿಖೆಯಲ್ಲಿ ಪ್ರಮುಖ ತಿರುವು ದೊರೆತಿದೆ.

ಏರ್‌ಏಷ್ಯಾ ವಿಮಾನ ದುರಂತಕ್ಕೂ ಮುನ್ನ ಅಂದರೆ ವಿಮಾನವು ವಾಯುಗೋಪುರದ ಸಂಪರ್ಕ ಕಡಿತಗೊಳ್ಳುವ ಮುನ್ನ ವಿಮಾನದ ಪೈಲಟ್ ತನ್ನ ಸೀಟ್‌ನಿಂದ ಎದ್ದುಹೋಗಿದ್ದ ವಿಚಾರ ತಿಳಿದುಬಂದಿದೆ. ಆಗ ಸಹ ಪೈಲಟ್ ವಿಮಾನ ಚಾಲನೆ ಮಾಡುತ್ತಿದ್ದು, ಈ ವೇಳೆ ವಿಮಾನವು ವಾಯುಗೋಪುರದ ಸಂಪರ್ಕ ಕಡಿದುಕೊಂಡಿದೆ. ಈ ವೇಳೆ ಪೈಲಟ್ ತುರ್ತಾಗಿ ತನ್ನ ಸೀಟಿಗೆ ವಾಪಸಾಗಿದ್ದಾನಾದರೂ ಅಷ್ಟು ಹೊತ್ತಿಗಾಗಲೇ ಕಾಲಮಿಂಚಿ ಹೋಗಿತ್ತು ಎಂದು ವಿಮಾನ ದುರಂತದ ತನಿಖೆ ಪಾಲ್ಗೊಂಡಿರುವ ಅಧಿಕಾರಿಗಳು ಹೇಳಿದ್ದಾರೆ.

ವಿಮಾನವು ವಾಯುಗೋಪುರದ ಸಂಪರ್ಕ ಕಡಿತಗೊಳ್ಳುವ ಮುನ್ನ ಪೈಲಟ್ ಮತ್ತು ಸಹ ಪೈಲಟ್ ನಡೆಸಿದ್ದ ಮಾತುಕತೆಗಳನ್ನು ಆಧರಿಸಿ ತನಿಖಾಧಿಕಾರಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ವಿಮಾನ ದುರಂತದ ತನಿಖೆಯನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ(ಎನ್ಟಿಎಸ್ಸಿ) ನಡೆಸುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಲು ಏರ್ ಏಷ್ಯಾ ಸಂಸ್ಥೆ ನಿರಾಕರಿಸಿದೆ.

ಡಿಸೆಂಬರ್‌ 28ರಂದು ಇಂಡೊನೇಷ್ಯಾದ ಸುರಬಯಾದಿಂದ ಸಿಂಗಪುರಕ್ಕೆ ಹೋಗುತ್ತಿದ್ದ ಏರ್‌ಏಷ್ಯಾ  ಸಂಸ್ಥೆಯ ‘ಏರ್‌ಬಸ್‌– ಎ320’ ವಿಮಾನ ಜಾವಾ ಸಮುದ್ರದಲ್ಲಿ ನಿಗೂಢವಾಗಿ ಪತನಗೊಂಡಿತ್ತು. ವಿಮಾನದಲ್ಲಿ 162 ಪ್ರಯಾಣಿಕರಿದ್ದರು. ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದರು.


Related Stories

No stories found.

Advertisement

X
Kannada Prabha
www.kannadaprabha.com