ಲೋಕ ಅದಾಲತ್ ಫೆ.14ರಿಂದ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ರಾಜ್ಯದಲ್ಲಿ ಫೆ.14 ರಿಂದ ಡಿಸೆಂಬರ್‍ವರೆಗೆ...
ಲೋಕ ಅದಾಲತ್ ಫೆ.14ರಿಂದ

ಬೆಂಗಳೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ರಾಜ್ಯದಲ್ಲಿ ಫೆ.14 ರಿಂದ ಡಿಸೆಂಬರ್‍ವರೆಗೆ ಲೋಕ ಅದಾಲತ್ ನಡೆಸಲು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ವೇಳಾಪಟ್ಟಿ ಸಿದ್ದಪಡಿಸಿದೆ.

ಶುಕ್ರವಾರ ಹೈಕೋರ್ಟ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾ. ಎನ್. ಕೆ.ಪಾಟೀಲ್ ಲೋಕ್ ಅದಾಲತ್ ವೇಳಾ ಪಟ್ಟಿ ಕುರಿತು ಮಾಹಿತಿ ನೀಡಿದರು.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಫೆ.14ರಿಂದ ರಾಜ್ಯದಲ್ಲಿ ಪ್ರತಿ ತಿಂಗಳು ಲೋಕ ಅದಾಲತ್ ನಡೆಸಲಿದೆ. ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಎಲ್ಲ ಜಿಲ್ಲಾ ಹಾಗೂ ತಾಲೂಕು ಕೋರ್ಟ್‍ಗಳಲ್ಲಿ ಅದಾಲತ್ ನಡೆಸಲಾಗುವುದು. ಈ ವೇಳೆ ಕೋರ್ಟ್‍ನಲ್ಲಿ ವಿಚಾರಣೆಗೆ ಬಾಕಿಯಿರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣ ಗಳನ್ನು ಕಕ್ಷಿದಾರರ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಅದಾಲತ್ ಸಹಕಾರಿಯಾಗಲಿದೆ ಎಂದರು.

ಕಳೆದ ವರ್ಷ ನಡೆಸಿದ 2ನೇ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ರಾಜ್ಯದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದ 2,24,778 ಮತ್ತು ವ್ಯಾಜ್ಯಪೂರ್ವ 13,11,846 ಸೇರಿ ಒಟ್ಟು 15,55,624 ಪ್ರಕರಣ ಗಳನ್ನು ಇತ್ಯರ್ಥಪಡಿಸಲಾಗಿದೆ. ವರ್ಷಾನುಗಟ್ಟಲೆ ಕೋರ್ಟ್‍ಗೆ ಅಲೆದಾಡದೇ ತ್ವರಿತವಾಗಿ ಪ್ರಕರಣ ಇತ್ಯರ್ಥಡಿಸಿಕೊಳ್ಳಲು ಲೋಕ ಅದಾಲತ್ ಸೂಕ್ತ ವೇದಿಕೆಯಾಗಿದೆ.

ವ್ಯಾಜ್ಯದಾರರು ಇದರ ಲಾಭ ಪಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು. ರಾಜ್ಯ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಅಶೋಕ್ ನಿಜಗಣ್ಣನವರ್ ಇದ್ದರು.

ಅದಾಲತ್‍ನ ವೇಳಾಪಟ್ಟಿ

  • ಫೆ.14 ಬ್ಯಾಂಕ್, ಸಾಲ ವಸೂಲಾತಿ ಮತ್ತು ವರ್ಗಾವಣೆ ಲಿಖಿತಗಳ ಅಧಿನಿಯಮ ದಡಿಯ ವ್ಯಾಜ್ಯಗಳ ಅದಾಲತ್.
  • ಮಾ.14- ಕಂದಾಯ, ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು.
  • ಏ.11- ಕಾರ್ಮಿಕ, ಕೌಟುಂಬಿಕ ಪ್ರಕರಣ.
  • ಮೇ 9 ಅಥವಾ ಜೂ 13- ಮೋಟಾರು ವಾಹನ ಅಪಘಾತ ಪರಿಹಾರ, ವಿಮೆ ಪ್ರಕರಣ.
  • ಜು.11- ವಿದ್ಯುತ್, ನೀರು, ದೂರವಾಣಿ, ಸಾರ್ವಜನಿಕ ಸೌಲಭ್ಯ ವಿವಾದಗಳು.
  • ಆ.8- ಗ್ರಾಹಕ ವ್ಯಾಜ್ಯ, ಕಂದಾಯ ಪ್ರಕರಣ.
  • ಸೆ.12- ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ.
  • ಅ.10- ಸಂಚಾರ, ಲಘು ಮತ್ತು ಪುರಸಭೆಯ ಪ್ರಕರಣಗಳನ್ನು ವಿಚಾರಣೆ ನಡೆಸಲಾಗುವುದು.
  • ನವೆಂಬರ್ ಹಾಗೂ ಡಿಸೆಂಬರ್-ರಾಷ್ಟ್ರೀಯ ಲೋಕ ಅದಾಲತ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com