
ಶಿಮ್ಲಾ: ಸಹೋದ್ಯೋಗಿ ನ್ಯಾಯಾಧೀಶೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಾಧೀಶರೊಬ್ಬರು ಅಮಾನತುಗೊಂಡಿರುವ ಘಟನೆ ಗುರುವಾರ ನಡೆದಿದೆ.
ಮಾದಕ ವ್ಯಸನ ಕುರಿತಂತೆ ಕಾರ್ಯಕ್ರಮ ನಿಮಿತ್ತ ಹಿಮಾಚಲ ಪ್ರದೇಶದ ಮನಾಲಿ ನಗರಕ್ಕೆ ಪ್ರವಾಸ ಹೋಗಿದ್ದೆವು. ಈ ವೇಳೆ ನ್ಯಾಯಾಧೀಶರು ರೆಸಾರ್ಟ್ ಒಂದಕ್ಕೆ ತನ್ನೊಡನೆ ಬರುವಂತೆ ಹಾಗೂ ತನ್ನೊಡನಿರುವಂತೆ ಒತ್ತಾಯಿಸಿದ್ದರು ಎಂದು ನ್ಯಾಯಾಧೀಶೆ ಆರೋಪಿಸಿದ್ದಾರೆ.
ಮಹಿಳಾ ನ್ಯಾಯಾಧೀಶರ ಆರೋಪದ ಕುರಿತಂತೆ ಇಂದು ವಿಚಾರಣೆ ನಡೆಸಿದ ಹಿಮಾಚಲ ಪ್ರದೇಶದ ಹೈ ಕೋರ್ಟ್, ನ್ಯಾಯಾಧೀಶರ ಹೆಸರು ಹೇಳದೆ ನ್ಯಾಯಾಧೀಶರನ್ನು ಅಮಾನತು ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ಮನ್ಸೂರ್ ಅಹ್ಮದ್ ಮಿರ್ ಅವರಿಗೆ ಒಪ್ಪಿಸಿದೆ.
Advertisement