ಮೃತ ಬಾಲಕಿ ಸೋನಮ್
ದೇಶ
ಹೇಮಮಾಲಿನಿ ಕಾರು ಅಪಘಾತ ಪ್ರಕರಣ: ಬಾಲಕಿ ಕುಟುಂಬಸ್ಥರ ಚಿಕಿತ್ಸೆಗೆ ನಿರ್ಲಕ್ಷ್ಯ?
ರಾಜಸ್ತಾನದಲ್ಲಿ ನಟಿ ಹಾಗೂ ಸಂಸದೆ ಹೇಮಮಾಲಿನಿ ಚಲಿಸುತ್ತಿದ್ದ ಕಾರು ಹಾಗೂ ಮತ್ತೊಂದು ಆಲ್ಟೋ ಕಾರು ಅಪಘಾತಕ್ಕೀಡಾದ ತಕ್ಷಣವೇ, ಹೇಮ ಮಾಲಿನಿ...
ರಾಜಸ್ತಾನದಲ್ಲಿ ನಟಿ ಹಾಗೂ ಸಂಸದೆ ಹೇಮಮಾಲಿನಿ ಚಲಿಸುತ್ತಿದ್ದ ಕಾರು ಹಾಗೂ ಮತ್ತೊಂದು ಆಲ್ಟೋ ಕಾರು ಅಪಘಾತಕ್ಕೀಡಾದ ತಕ್ಷಣವೇ, ಹೇಮ ಮಾಲಿನಿ ಅವರನ್ನು ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಲ್ಟೋ ಕಾರಿನಲ್ಲಿದ್ದ ಮೃತ ಬಾಲಕಿ ಪೋಷಕರ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಲಾಯಿತು ಎಂದು ಆರೋಪಿಸಲಾಗಿದೆ.
ಎಲ್ಲಾ ಮಾಧ್ಯಮ ಹಾಗೂ ಪೊಲೀಸರು ಹೇಮಾ ಮಾಲಿನಿ ಅವರನ್ನು ಆಸ್ಪತ್ರೆಗೆ ಸೇರಿಸಲು ಗಮನ ತೋರಿದರು. ಹೇಮಮಾಲಿನಿಗಿಂತ ತೀವ್ರವಾಗಿ ಗಾಯಗೊಂಡಿದ್ದ ಆಲ್ಟೋ ಕಾರಿನಲ್ಲಿದ್ದವರಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಲಾಯಿತು ಎಂದು ದೂರಲಾಗಿದೆ.
ನಂತರ ಆಲ್ಟೋ ಕಾರಿನಲ್ಲಿ ಮೃತ ಬಾಲಕಿ ಸೋನಮ್ , ಹನುಮಾನ್ ಮಹಾಜನ್, ಆತನ ಹೆಂಡತಿ ಶಿಖಾ, ಸೋಮಿಲ್, ಹಾಗೂ ಸೀಮಾ ರನ್ನು ಜೈಪುರದ ಎಸ್ ಎಂಎಸ್ ಆಸ್ಪತ್ರೆಗೆ ದಾಖಲಿಸಲಾಯ್ತು.
ಇನ್ನು ಅಪಘಾತದ ಸಂಬಂಧ ಹನುಮಾನ್ ರಾಜಸ್ತಾನದ ಕೋಟ್ ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೇಮ ಮಾಲಿನಿ ಅವರ ಕಾರು ಚಾಲಕ ರಮೇಶ್ ಚಂದ್ ಠಾಕೂರ್ ನನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ