ವ್ಯಾಪಂ ಹಗರಣ: ಪ್ರಭಾವಿಗಳಿಂದ ತನಿಖಾ ತಂಡಕ್ಕೆ ಜೀವ ಬೆದರಿಕೆ

ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿಯ ನೇಮಕಾತಿಗೆ ಸಂಬಂಧಿತ ಬಹುಕೋಟಿ ವ್ಯಾಪಂ (ವ್ಯಾವಸಾಯಿಕ ಪರೀಕ್ಷಾ ಮಂಡಳಿ) ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಕೆಲವು...
ವ್ಯಾಪಂ ಹಗರಣ: ಪ್ರಭಾವಿಗಳಿಂದ ತನಿಖಾ ತಂಡಕ್ಕೆ ಜೀವ ಬೆದರಿಕೆ (ಸಾಂದರ್ಭಿಕ ಚಿತ್ರ)
ವ್ಯಾಪಂ ಹಗರಣ: ಪ್ರಭಾವಿಗಳಿಂದ ತನಿಖಾ ತಂಡಕ್ಕೆ ಜೀವ ಬೆದರಿಕೆ (ಸಾಂದರ್ಭಿಕ ಚಿತ್ರ)

ಭೂಪಾಲ್: ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿಯ ನೇಮಕಾತಿಗೆ ಸಂಬಂಧಿತ ಬಹುಕೋಟಿ ವ್ಯಾಪಂ (ವ್ಯಾವಸಾಯಿಕ ಪರೀಕ್ಷಾ ಮಂಡಳಿ) ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಕೆಲವು ಪಟ್ಟಭದ್ರ ಹಿತಾಸಕ್ತರಿಂದ ಜೀವ ಬೆದರಿಕೆ ಕರೆಗಳು ಬಂದಿರುವುದಾಗಿ ಹೇಳಲಾಗುತ್ತಿದೆ.

ಬಹುಕೋಟಿ ವ್ಯಾಪಂ ಹಗರಣವನ್ನು ಎಸ್ ಟಿಎಫ್ ತನಿಖಾ ತಂಡದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈಗಾಗಲೇ 15 ಕ್ಕೂ ಹೆಚ್ಚು ಚಾರ್ಜ್ ಶೀಟ್ ಗಳನ್ನು ದಾಖಲಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ಅಧಿಕಾರದಲ್ಲಿರುವ ಉನ್ನತ ಅಧಿಕಾರಿಗಳ ಹೆಸರು ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಪ್ರಕರಣದ ತನಿಖೆಯಲ್ಲಿ ಪ್ರಮುಖ ಅಧಿಕಾರಿಗಳು ಎಂದು ಹೇಳಲಾಗುತ್ತಿರುವ ವಿಶೇಷ ತನಿಖಾ ತಂಡದ ಸಹಾಯಕ ಪೊಲೀಸ್ ಅಧಿಕಾರಿ ಆಶಿಶ್ ಖರೆ ಹಾಗೂ ಪೊಲೀಸ್ ಉಪ ಅಧೀಕ್ಷಕ ಡಿ.ಎಸ್ ಬಘೇಲ್ ಅವರಿಗೆ ಕೆಲವು ಮೇಲಧಿಕಾರಿಗಳಿಂದ ಬೆದರಿಕೆಯ ಕರೆಗಳು ಬರುತ್ತಿದ್ದು, ರಕ್ಷಣೆಗಾಗಿ ಸರ್ಕಾರದ ಬಳಿ ಮನವಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಮಾತನಾಡಿರುವ ಎಸ್ಐಟಿ ಮುಖ್ಯಸ್ಥ, ಚಂದ್ರೇಶ್ ಭೂಷಣ್ ಅವರು, ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಬೆದರಿಕೆ ಕರೆಗಳು ಬಂದಿರುವುದು ನಿಜ. ಅಧಿಕಾರಿಗಳಿಗೆ ಪದೇ ಪದೇ ಅನಾಮಧೇಯ ಕರೆಗಳು ಬರುತ್ತಿದ್ದು, ಆರೋಪಿಗಳು ಯಾರೆಂದು ಹೇಳದೆಯೇ ನಿನ್ನನ್ನು ನೋಡಿಕೊಳ್ಳುತ್ತೇನೆಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಈ ಕುರಿತ ಮಾಹಿತಿಯನ್ನು ಈಗಾಗಲೇ ಮಧ್ಯಪ್ರದೇಶ ಹೈ ಕೋರ್ಟ್ ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೂ 44 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದು, ಪ್ರಕರಣ ಸಂಬಂಧ ತನಿಖಾಧಿಕಾರಿಗಳು 23 ಮಂದಿಯದ್ದು ಅಸಹಜ ಸಾವು ಎಂದು ಮಧ್ಯಪ್ರದೇಶದ ಹೈ ಕೋರ್ಟ್ ಗೆ ವರದಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com