ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕು ರ್ಯಾಂಕ್ ಪಡೆದವರು
ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕು ರ್ಯಾಂಕ್ ಪಡೆದವರು

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ 4 ರ್ಯಾಂಕ್ ಹೆಣ್ಮಕ್ಕಳ ಪಾಲು

ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಮೊದಲ ನಾಲ್ಕು ರ್ಯಾಂಕ್‌ಗಳನ್ನು ಹೆಣ್ಮಕ್ಕಳು ಗಳಿಸಿಕೊಂಡಿದ್ದಾರೆ...

ನವದೆಹಲಿ: ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಮೊದಲ ನಾಲ್ಕು ರ್ಯಾಂಕ್‌ಗಳನ್ನು ಹೆಣ್ಮಕ್ಕಳು ಗಳಿಸಿಕೊಂಡಿದ್ದಾರೆ. ಅಗಸ್ಟ್ 24ರಂದು ಯುಪಿಎಸ್‌ಸಿ ಪರೀಕ್ಷೆ ನಡೆದಿದ್ದು, 9.45 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು.

ಮೊದಲ ನಾಲ್ಕು ರ್ಯಾಂಕ್‌ಗಳನ್ನು ಪಡೆದಿರುವ ಹೆಣ್ಮಕ್ಕಳ ಪ್ರತಿಕ್ರಿಯೆ ಏನು?


ಇರಾ ಸಿಂಘಲ್  - ಪ್ರಥಮ ರ್ಯಾಂಕ್
ದೆಹಲಿ ಮೂಲದ ಇರಾ ಸಿಂಘಾಲ್ ಅಂಗವೈಕಲ್ಯ ಹೊಂದಿದ್ದು ರೆವೆನ್ಯೂ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಪ್ರಥಮ ರ್ಯಾಂಕ್ ಗಳಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಇರಾ,  ನಾನು ತುಂಬಾ ಖುಷಿಯಾಗಿದ್ದೇನೆ. ನನಗೆ ಪ್ರಥಮ ರ್ಯಾಂಕ್ ಬರುತ್ತದೆ ಎಂದು ಊಹಿಸಿರಲಿಲ್ಲ. ಪರೀಕ್ಷೆಗೆ ತಯಾರಿ ನಡೆಸಿದ್ದೆ, ನಾನು ಐಎಎಸ್ ಅಧಿಕಾರಿಯಾಗಲು ಬಯಸುತ್ತೇನೆ. ಅಂಗ ವೈಕಲ್ಯವಿರುವವರಿಗೆ ನಾನು ಸಹಾಯ ಮಾಡಲು ಬಯಸುತ್ತೇನೆ.


ರೇಣು ರಾಜ್  ದ್ವಿತೀಯ ರ್ಯಾಂಕ್


ಕೊಲ್ಲಂನಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರೇಣು ರಾಜ್ ಮೊದಲ ಬಾರಿ ಈ ಪರೀಕ್ಷೆ ಬರೆದಿದ್ದಾಳೆ. ಕಳೆದ ಒಂದು ವರ್ಷದಿಂದ ನಾನು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಅದು ಫಲ ಕೊಟ್ಟಿದೆ. ನಾನು ಬಡವರ ಒಳಿತಿಗಾಗಿ ಕೆಲಸ ಮಾಡುತ್ತೇನೆ.


ನಿಧಿ ಗುಪ್ತಾ  - ತೃತೀಯ ರ್ಯಾಂಕ್
ಕಸ್ಟಮ್ಸ್ ಆ್ಯಂಡ್ ಸೆಂಟ್ರಲ್ ಎಕ್ಸೈಸ್  ಅಸಿಸ್ಟೆಂಟ್ ಕಮೀಷನರ್ ಆಗಿರುವ ನಿಧಿ ಗುಪ್ತಾ, ತನ್ನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದಿದ್ದಾರೆ.

ವಂದನಾ ರಾವ್- ನಾಲ್ಕನೇ ರ್ಯಾಂಕ್
ರ್ಯಾಂಕ್ ಪಡೆದಿರುವ ಬಗ್ಗೆ ತುಂಬಾ ಖುಷಿಯಾಗಿದೆ. ಸಾಕಷ್ಟು ಪರಿಶ್ರಮ ಮಾಡಿದ್ದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com