
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಸೇನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಂತರಿಸಿದ್ದ ಸಂಗ್ರಹ ನಿಧಿ ಕೇವಲ ಫೋಟೋ ಪ್ರದರ್ಶನ ಎಂಬುದು ತಿಳಿದುಬಂದಿದೆ.
ಪ್ರವಾಹ ಕಾರ್ಯಾಚರಣೆಗೆ ನೆರವು ನೀಡಲು ಮುಂದಾಗಿದ್ದ ಭಾರತೀಯ ಸೇನೆ ತನ್ನ ಎಲ್ಲಾ ಶ್ರೇಣಿಯ ನೌಕರರ ಒಂದು ದಿನದ ವೇತವನ್ನು ಸಂಗ್ರಹಿಸಿ, ಜ.15 ರಂದು 100 ಕೋಟಿ ರೂಪಾಯಿ ಮೊತ್ತದ ಚೆಕ್ ನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿತ್ತು.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಮ್ಮುಖದಲ್ಲಿ ಸೇನಾ ಮುಖ್ಯಸ್ಥರು 100 ರೂ ಮೊತ್ತದ ಚೆಕ್ ನ್ನು ಹಸ್ತಾಂತರಿಸಿದ್ದರು. ಸೇನೆ ಹಸ್ತಾಂತರಿಸಿದ್ದ ಮೊತ್ತ ಈವರೆಗೂ ರಾಷ್ಟ್ರೀಯ ಪರಿಹಾರ ನಿಧಿಗೆ ಸೇರಿಲ್ಲ ಎಂಬುದು ಆರ್.ಟಿ.ಐ ಮೂಲಕ ತಿಳಿದುಬಂದಿದೆ. ಈ ಮಾಹಿತಿಯನ್ನು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಈ ಮಾಹಿತಿ ಬಹಿರಂಗವಾಗಿರುವುದರಿಂದ ರಕ್ಷಣಾ ಸಚಿವಾಲಯಕ್ಕೆ ತೀವ್ರ ಮುಜುಗರ ಉಂಟಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸೇನೆ ಪ್ರಮುಖ ಪಾತ್ರ ವಹಿಸಿತ್ತು. ಆದರೆ ತಮ್ಮ ಅನುಮತಿ ಇಲ್ಲದೇ ಒಂದು ದಿನದ ವೇತನವನ್ನು ಕಡಿತಗೊಳಿಸುವುದಕ್ಕೆ 2000 ಕ್ಕೂ ಹೆಚ್ಚು ಸೇನಾ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು.
Advertisement