
ಜೋದ್ಪುರ: ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಓದುವುದಕ್ಕೆ ಹೆದರಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಸೋಮವಾರ ನಡೆದಿದೆ.
ಗಜೇಂದ್ರ ಸಿಂಗ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಈತ ಜೈಪುರ ಸಮೀಪದ ಪುಲೇರಾ ಎಂಬ ಗ್ರಾಮದ ನಿವಾಸಿಯಾಗಿದ್ದಾನೆ. ಅಮ್ಸ್ ಕಾಲೇಜಿನಲ್ಲಿ ಮೊದಲನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಈತ ಇದ್ದಕ್ಕಿದ್ದಂತೆ ಓದಿನ ಕಡೆ ಗಮನ ಹರಿಸಲಾಗದೆ, ಬೇಸತ್ತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಗೇಜೇಂದ್ರ ಸಿಂಗ್ ಡೆತ್ ನೋಟ್ ಬರೆದಿದ್ದು, ಪತ್ರದಲ್ಲಿ ಸಂಸ್ಥೆಯಲ್ಲಿ ಕಂಠಪಾಠ ಮಾಡುವ ಪದ್ಧತಿ ಇದದ್ದು, ವೈದ್ಯಕೀಯ ಶಿಕ್ಷಣ ಬಹಳ ಕಷ್ಟವಾಗುತ್ತಿದೆ. ಓದಿದ ವಿಷಯವನ್ನು ಮತ್ತೆ ಮತ್ತೆ ಓದಿ ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಕಷ್ಟವಾಗುತ್ತಿದೆ ಎಂದು ಹೇಳಿರುವ ಯುವಕ ವೈದ್ಯಕೀಯ ವೃತ್ತಿಗೆ ನಾನು ಸೂಕ್ತ ವ್ಯಕ್ತಿ ಅಲ್ಲ. ಹಾಗಾಗಿ ನಾನು ಈ ಭೂಮಿ ಮೇಲೆ ಬದುಕಲು ಯೋಗ್ಯ ವ್ಯಕ್ತಿ ಅಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿ ಬರೆದಿರುವ ಡೆತ್ ನೋಟ್ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಏಮ್ಸ್ ನಿರ್ದೇಶಕ ಸಂಜೀವ ಮಿಶ್ರಾ ನಾವು ಯಾವುದೇ ವಿದ್ಯಾರ್ಥಿಗೂ ಒತ್ತಡ ಹೇರಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
Advertisement