
ನವದೆಹಲಿ : ಕಾರ್ಪೊರೆಟ್ ಬೇಹುಗಾರಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ¸ಸೋರಿಕೆಗೆ ಕಡಿವಾಣ ಹಾಕಲು ಕೇಂದ್ರಸರ್ಕಾರ ಹೊರಗುತ್ತಿಗೆಯ ನೌಕರರಿಗೆ
ಕಡ್ಡಾಯವಾಗಿ ಭದ್ರತಾ ಸ್ಕ್ರೀನಿಂಗ್ ನಡೆಸಬೇಕೆಂದು ಎಲ್ಲ ಇಲಾಖೆಗಳಿಗೆ ಆದೇಶ ನೀಡಿದೆ. ಅವರಿಗೆ ಗೌಪ್ಯ ಕೆಲಸಗಳನ್ನು ನೀಡದಂತೆ, ಇಂಟರ್ನೆಟ್ ಇರುವ ಕಂಪ್ಯೂಟರ್ ಗಳಲ್ಲಿ ಕೆಲಸ ನೀಡದಂತೆಯೂ ಆದೇಶಿಸ ಲಾಗಿದೆ. ಗೌಪ್ಯ ಕೆಲಸಗಳಿಗಾಗಿಯೇ ಪ್ರತ್ಯೇಕ ಕಂಪ್ಯೂಟರ್ ಮತ್ತು ನೌಕರರನ್ನು ನಿಯೋಜಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದ್ದು, ಜೂ.30ರಂದೇ ಎಲ್ಲ ಸಚಿವಾಲಯಗಳಿಗೂ ಈ ಮಾರ್ಗಸೂಚಿ ತಲುಪಿಸಲಾಗಿದೆ.
Advertisement