
ನವದೆಹಲಿ: ತಂದೆಯ ಅನುಮತಿ ಪಡೆಯದೇ ಹಾಗೂ ಮಗುವಿನ ತಂದೆಯ ಹೆಸರನ್ನು ಎಲ್ಲಿಯೂ ಬಹಿರಂಗ ಪಡಿಸದೇ ಅವಿವಾಹಿತ ಮಹಿಳೆ ಮಗುವಿಗೆ ಗಾರ್ಡಿಯನ್ ಆಗಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ತಂದೆಗೆ ಯಾವುದೇ ಸೂಚನೆ ನೀಡದೇ ಅವಿವಾಹಿತ ಮಹಿಳೆ ತನ್ನ ಮಗುವಿಗೆ ಗಾರ್ಡಿಯನ್ ಆಗಬಹುದೆಂದು ನ್ಯಾಯಮೂರ್ತಿ ವಿಕ್ರಮ್ ಸೇನ್ ನೇತೃತ್ವದ ನ್ಯಾಯ ಪೀಠ ತಿಳಿಸಿದೆ.ಕೆಳನ್ಯಾಯಾಲಯ ಹಾಗೂ ಹೈಕೋರ್ಟ್ ಮಗುವಿನ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳದೇ ತೀರ್ಪು ನೀಡಿದ್ದವು ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ.
ತನ್ನ ಮಗುವಿನ ಗಾರ್ಡಿಯನ್ ಶಿಪ್ ತೆಗೆದುಕೊಳ್ಳಲು ಮಗುವಿನ ತಂದೆಯ ಗುರುತು ಹಾಗೂ ಅನುಮತಿ ಅವಶ್ಯಕತೆಯಿಲ್ಲವೆಂದು, ಸರ್ಕಾರಿ ಕೆಲಸದಲ್ಲಿರುವ ಅವಿವಾಹಿತ ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಅಧೀನ ಹಾಗೂ ಉಚ್ಚ ನ್ಯಾಯಾಲಯಗಳು, ತಂದೆಯ ಅನುಮತಿ ಕಡ್ಡಾಯ ಎಂದು ತೀರ್ಪು ನೀಡಿದ್ದವು. ಈ ತೀರ್ಪಿನ ವಿರುದ್ಧ ಮಹಿಳೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪನ್ನು ಮರು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಗಾರ್ಡಿಯನ್ ಆಗಲು ತಂದೆಯ ಒಪ್ಪಿಗೆ ಅಗತ್ಯವಿಲ್ಲವೆಂದು ಮಹತ್ವದ ತೀರ್ಪು ನೀಡಿದೆ.
Advertisement