ಮ್ಯಾಗಿ ನಾಶಕ್ಕೆ 20 ಕೋಟಿ ರೂಪಾಯಿ!

ದೇಶಾದ್ಯಂತ ಮಾರಾಟ ನಿಷೇಧಗೊಂಡಿರುವ ಹಿನ್ನೆಲೆಯಲ್ಲಿ ಮ್ಯಾಗಿ ನೂಡಲ್ಸ್ ಪ್ಯಾಕೆಟ್ ಗಳನ್ನು ನಾಶಪಡಿಸುವ ಕೆಲಸವನ್ನು ನೆಸ್ಲೆ ಇಂಡಿಯಾ ಕಂಪೆನಿ, ಅಂಬುಜಾ ಸಿಮೆಂಟ್ ಕಂಪೆನಿಗೆ ವಹಿಸಿದ್ದು,...
ಮಾರುಕಟ್ಟೆಯಿಂದ ಹಿಂಪಡೆದಿರುವ ಮ್ಯಾಗಿ ಪ್ಯಾಕೆಟ್ ಗಳನ್ನು ಮಹಾರಾಷ್ಟ್ರದ ಚಂದ್ರಪುರ್ ನಲ್ಲಿ ಸುಟ್ಟುಹಾಕಲಾಗುತ್ತದೆ.
ಮಾರುಕಟ್ಟೆಯಿಂದ ಹಿಂಪಡೆದಿರುವ ಮ್ಯಾಗಿ ಪ್ಯಾಕೆಟ್ ಗಳನ್ನು ಮಹಾರಾಷ್ಟ್ರದ ಚಂದ್ರಪುರ್ ನಲ್ಲಿ ಸುಟ್ಟುಹಾಕಲಾಗುತ್ತದೆ.

ನವದೆಹಲಿ: ದೇಶಾದ್ಯಂತ ಮಾರಾಟ ನಿಷೇಧಗೊಂಡಿರುವ ಹಿನ್ನೆಲೆಯಲ್ಲಿ ಮ್ಯಾಗಿ ನೂಡಲ್ಸ್  ಪ್ಯಾಕೆಟ್ ಗಳನ್ನು ನಾಶಪಡಿಸುವ ಕೆಲಸವನ್ನು ನೆಸ್ಲೆ ಇಂಡಿಯಾ ಕಂಪೆನಿ, ಅಂಬುಜಾ ಸಿಮೆಂಟ್ ಕಂಪೆನಿಗೆ ವಹಿಸಿದ್ದು, ಇದಕ್ಕಾಗಿ ಸುಮಾರು 20 ಕೋಟಿ ರೂಪಾಯಿ ವ್ಯಯಿಸಲಿದೆ.

ಈ ಹಿಂದೆ ಗುಜರಾತ್ ಅಂಬುಜಾ ಸಿಮೆಂಟ್ ಎಂಬ ಹೆಸರಿನಲ್ಲಿ ತಯಾರಾಗುತ್ತಿದ್ದ ಅಂಬುಜಾ ಸಿಮೆಂಟ್ ಘಟಕವಿರುವ ಮಹಾರಾಷ್ಟ್ರದ ಚಂದ್ರಾಪುರ್ ನಲ್ಲಿ ಮಾರುಕಟ್ಟೆಯಿಂದ ಹಿಂಪಡೆದುಕೊಂಡಿರುವ ಮ್ಯಾಗಿ ಪ್ಯಾಕೆಟ್ ಗಳನ್ನು ಸುಟ್ಟುಹಾಕಲಾಗುತ್ತದೆ ಎಂದು ನೆಸ್ಲೆ ಇಂಡಿಯಾ ಕಂಪೆನಿಯ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮ್ಯಾಗಿ ಪ್ಯಾಕೆಟ್ ಗಳನ್ನು ನಾಶಪಡಿಸಲು ಎಷ್ಟು ಹಣ ಬೇಕಾಗಬಹುದು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮಾರುಕಟ್ಟೆಯಿಂದ ವಾಪಸ್ ತರಲು, ನಾಶಪಡಿಸುವ ಸ್ಥಳಕ್ಕೆ ಕೊಂಡೊಯ್ಯುವ ಸಾಗಾಣಿಕೆ ಖರ್ಚು ಎಲ್ಲವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಕಳೆದ ತಿಂಗಳು 5ರಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆದೇಶದಂತೆ ನೆಸ್ಲೆ ಇಂಡಿಯಾ ಕಂಪೆನಿ  ಮ್ಯಾಗಿ ನೂಡಲ್ಸ್ ನ ಎಲ್ಲಾ 9 ನಮೂನೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕಾಗಿ ಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com