ಮೋದಿ ಸರ್ಕಾರ ನಳಂದ ವಿವಿಯಿಂದ ನನ್ನನ್ನು ಪದಚ್ಯುತಿಗೊಳಿಸಿತ್ತು: ಅಮರ್ತ್ಯ ಸೇನ್

ಶೈಕ್ಷಣಿಕ ಸಂಸ್ಥೆಗಳ ಮೇಲೆ ತಮ್ಮ ನಿಯಂತ್ರಣ ಸಾಧಿಸುವ ಸಲುವಾಗಿ ಮೋದಿ ಸರ್ಕಾರ ನಳಂದ ವಿಶ್ವವಿದ್ಯಾಲಯದಿಂದ ನನ್ನು ಪದಚ್ಯುತಿಗೊಳಿಸಿತು ಎಂದು ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅವರು ಮಂಗಳವಾರ ಹೇಳಿದ್ದಾರೆ...
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್

ನವದೆಹಲಿ: ಶೈಕ್ಷಣಿಕ ಸಂಸ್ಥೆಗಳ ಮೇಲೆ ತಮ್ಮ ನಿಯಂತ್ರಣ ಸಾಧಿಸುವ ಸಲುವಾಗಿ ಮೋದಿ ಸರ್ಕಾರ ನಳಂದ ವಿಶ್ವವಿದ್ಯಾಲಯದಿಂದ ನನ್ನು ಪದಚ್ಯುತಿಗೊಳಿಸಿತು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರು ಮಂಗಳವಾರ ಹೇಳಿದ್ದಾರೆ.

ವಿಶ್ವಪ್ರಸಿದ್ಧ ನಳಂದ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಪುನರಾಯ್ಕೆಯಾಗುವ ಆಗುವ ಆಶೆಯಿಂದ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರು ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಳಂದ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಪುನರಾಯ್ಕೆಗೆ ಹಲವು ಸಮಸ್ಯೆಗಳಿದ್ದವು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಲ್ಲಿದ್ದ ಕೆಲವು ವಿದೇಶಿ ಸದಸ್ಯರು ನನ್ನನ್ನು ಪುನರಾಯ್ಕೆ ಮಾಡುವ ನಿರ್ಧಾರಕ್ಕೆ ತಕರಾರು ಎತ್ತಿದ್ದರಲ್ಲದೆ, ನನ್ನ ವಿರುದ್ಧ ಪರೋಕ್ಷವಾಗಿ ಯುದ್ದ ಮಾಡಲು ನಿಂತಿದ್ದರು. ಸಂಸ್ಥೆಯಲ್ಲಿ ನಿಷ್ಪ್ರಭಾವಿ ನಾಯಕನಾಗುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನೇ ಪುನರಾಯ್ಕೆ ಪ್ರಕ್ರಿಯೆಯಿಂದ ಹಿಂದೆ ಸರಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬಂದರೆ ನಳಂದ ವಿಶ್ವವಿದ್ಯಾಲಯದ ಒಂದರಲ್ಲೇ ಅಲ್ಲ, ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಯಲ್ಲೂ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ವಿವಾದಿತ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಕುರಿತಂತೆ ಮಾತನಾಡಿರುವ ಸೇನ್, ಭೂ ಸ್ವಾಧೀನ ಕಾಯ್ದೆ ಕುರಿತ ಕೇಂದ್ರ ಸರ್ಕಾರದ ನಿಲುವಳಿಯು ತಪ್ಪಾಗಿದೆ. ಕೇಂದ್ರ ಅಭಿವೃದ್ಧಿ ಪಥದತ್ತ ಸಾಗಲು ಮುಖ್ಯ ಕಾರಣವೇ ಮನುಷ್ಯರು ಹಾಗೂ ರೈತರು ಇಂತಹವರನ್ನು ಕಡೆಗಣಿಸುತ್ತಿರುವ ಕೇಂದ್ರದ ಕ್ರಮ ಸರಿಯಾದುದಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com