ಸ್ನಾತಕೋತ್ತರ ಪದವಿ ಇದ್ರೂ ಬಿಎಂಸಿಯಲ್ಲಿ ಪೌರ ಕಾರ್ಮಿಕ

ಮನುಷ್ಯ ಯಾವ ಕೆಲಸ ಮಾಡುವುದೂ ನಿಕೃಷ್ಟವಲ್ಲ. . ಆದರೆ ದೊಡ್ಡ ಹುದ್ದೆ ಪಡೆಯಬಲ್ಲ ವಿದ್ಯಾರ್ಹತೆ ಹೊಂದಿದ್ದೂ ಮುಂಬೈನ ಸುನಿಲ್ ಯಾದವ್...
ಸುನಿಲ್ ಯಾದವ್ ಮತ್ತು ಕುಟುಂಬ
ಸುನಿಲ್ ಯಾದವ್ ಮತ್ತು ಕುಟುಂಬ
Updated on

ಮುಂಬೈ  : ಮನುಷ್ಯ ಯಾವ ಕೆಲಸ ಮಾಡುವುದೂ ನಿಕೃಷ್ಟವಲ್ಲ. . ಆದರೆ ದೊಡ್ಡ ಹುದ್ದೆ  ಪಡೆಯಬಲ್ಲ ವಿದ್ಯಾರ್ಹತೆ ಹೊಂದಿದ್ದೂ ಮುಂಬೈನ ಸುನಿಲ್ ಯಾದವ್
ಎಂಬವರು  ಬೃಹತ್ ಮುಂಬೈ ಮಹಾನಗರ  ಪಾಲಿಕೆಯಲ್ಲಿ (ಬಿಎಂಸಿ) ಪೌರ ಕಾರ್ಮಿಕರಾಗಿ  ಕೆಲಸ ಮಾಡುತ್ತಿದ್ದಾರೆ. ಅವರು ನಾಲ್ಕು ವಿಷಯಗಳಲ್ಲಿ ಪದವಿ,  ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಕೆಲಸದ ಬಗ್ಗೆ ಚಿಂತಿಸದೆ  , ಅವರು ತಮ್ಮ ಚಿತ್ತವನ್ನು  ವಿದ್ಯಾರ್ಹತೆ ಹೆಚ್ಚಿಸಿಕೊಳ್ಳುವತ್ತ ನೆಟ್ಟಿದ್ದಾರೆ.

ಹೆಸರು  : ಸುನೀಲ್ ಯಾದವ್
ವಿದ್ಯಾರ್ಹತೆ: ಬಿ.ಕಾಂ, ಬಿ.ಎ(ಜರ್ನಲಿಸಂ),
ಎಂ.ಎ(ಇನ್ ಗ್ಲೋಬಲೈಸೇಷನ್ ಆ್ಯಂಡ್ ಲೇಬರ್)
, ಮಾಸ್ಟರ್ಸ್ ಇನ್ ಸೋಷಿಯಲ್ ವರ್ಕ್
ಉದ್ಯೋಗ : ಬೃಹನ್ಮುಂಬೈ ಮುನಿಸಿಪಲ್  ಕಾಪೊರೇಷನ್ನಲ್ಲಿ ಪೌರ ಕಾರ್ಮಿಕ

36 ವರ್ಷದ  ಸುನೀಲ್ ಯಾದವ್  ಕಳೆದ 9 ವರ್ಷಗಳಲ್ಲಿ ನಾಲ್ಕು ಡಿಗ್ರಿ ಪಡೆದಿದ್ದಾರೆ. ಈಗ ಟಾಟಾ ಇನ್‍ಸ್ಟಿಟ್ಯೂಟ್ ಆಫ್  ಸೋಶಿಯಲ್ ಸೈನ್ಸಸ್‍ನಲ್ಲಿ ಎಂ.ಫಿಲ್ ಕೂಡ ಮಾಡುತ್ತಿದ್ದಾರೆ.
ಆದರೆ ವಿದ್ಯೆಯಿಂದ ಬದುಕಿನ ಶೈಲಿ,ಉದ್ಯೋಗ, ಸಮಾಜದಲ್ಲಿ ತಮ್ಮಮ್ಮು ನೋಡುವ ಬಗೆ ಬದಲಾಗಬಹುದು ಎಂಬ  ಸುನೀಲ್ ನಂಬಿಕೆ ಹುಸಿಯಾಗಿದೆ. ಕೆಳ ವರ್ಗವೆಂದು ಇಷ್ಟೆಲ್ಲ ಓದಿಕೊಂಡಿದ್ದಾರೆ. ಆದರೆ ಈಗಲೂ ಅದೇ ಉದ್ಯೋಗದಲ್ಲೇ ಮುಂದುವರಿಯಬೇಕಾಗಿದೆ . ಈ ಸಾಧನೆ ನೋಡಿಯೂ  ಜನ ತನನ್ನನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಕೊರಗು ಸುನೀಲ್ ರನ್ನು ಕಾಡುತ್ತಿದೆ. ತಂದೆ ಅನಾರೋಗ್ಯಕ್ಕೀಡಾದ ಕಾರಣ ಅವರ ನೌಕರಿ ಸುನೀಲ್ ಗೆ ಹಸ್ತಾಂತರವಾಗಿದೆ .ಆದರೆ ಅಂಬೇಡ್ಕರ್ ಮಾತುಗಳನ್ನೇ ಆದರ್ಶವಾಗಿಟ್ಟುಕೊಂಡು ತನ್ನ ಸಂಬಳದ ಹಣದಲ್ಲೇ  ಓದಿಗೊಂದು ಭಾಗ ಇಟ್ಟು ಕೊಂಡು ಪೌರ ಕಾರ್ಮಿಕರಾಗಿ  ಕೆಲಸದ ನಡುವೆಯೇ ಓದಿ ಪದವಿ ಗಳಿಸಿದ್ದಾರೆ ಸುನೀಲ್  ಶಿಕ್ಷಣ ರಜೆ ಎಂಬ ಸೌಲಭ್ಯ ಬಿಎಂಸಿಯಲ್ಲಿ ಇದ್ದರೂ, ಅದಕ್ಕೆ ಅರ್ಜಿ ಸಲ್ಲಿಸಿ 18ತಿಂಗಳ ನಂತರ ರಜೆಗೆ ಅನುಮೋದನೆ ದೊರಕಿದೆ.ಸುನೀಲ್  ರಜೆಗೆ ಕಾಯದೆ ಓದಿ ಗೆದ್ದಿದ್ದಾರೆ. ಪತ್ನಿಗೂ ಶಿಕ್ಷಣದ ಮಹತ್ವ  ತಿಳಿಸಿ ಪದವಿ ಪಡೆಯುವಂತೆ ಮಾಡಿಸಿದ್ದಾರೆ


ಮನುಷ್ಯರು ಚರಂಡಿ ಇಳಿದು ಕೊಳಚೆ ಎತ್ತುವುದು, ಸತ್ತ ಪ್ರಾಣಿಗಳನ್ನು ಎತ್ತುವುದು ಈ ಕೆಲಸಗಳಿಗೆ ನಿಷೇಧ ಹೇರಿ ಎರಡು ವರ್ಷ ಕಳೆದಿದೆ. ಆದರೆಅದಕ್ಕೆ ಪರ್ಯಾಯ ವ್ಯವಸ್ಥೆ ಬಂದಿಲ್ಲ. ಈಗಲೂ ಮನುಷ್ಯರೇ ಆ ಕೆಲಸ ಮಾಡುತ್ತಿರೆ. ಕಾನೂನುಗಳು ಸೂಕ್ತವಾಗಿ ಜಾರಿಯಾಗದೇ ಹೋದರೆ ಅಂಥ ಕಾನೂನು ಇದ್ದರೂ ಪ್ರಯೋಜನವಿಲ್ಲ.
- ಬೇಜ್‍ವಾಡ ವಿಲ್ಸನ್, ಸಫಾಯಿ ಕರ್ಮಚಾರಿ ಆಂದೋಲನದ
ರಾಷ್ಟ್ರೀಯ ಸಂಚಾಲಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com