
ತಾಷ್ಕೆಂಟ್: ಕೇಂದ್ರ ಏಷ್ಯಾ ಹಾಗೂ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ಬೇಕಿಸ್ತಾನದ ತಾಷ್ಕೆಂಟ್ ನಲ್ಲಿ ಭಾರತದ ದ್ವಿತೀಯ ಪ್ರಧಾನಿ
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. 1966ರಲ್ಲಿ ಹೃದಯಾಘಾತದಿಂದಾಗಿ ಶಾಸ್ತ್ರಿ ಅವರು ಇದೇ ಪ್ರದೇಶದಲ್ಲಿ ಕೊನೆಯುಸಿರೆಳಿದ್ದಿದ್ದರು.ಈ ಹಿನ್ನೆಲೆಯಲ್ಲಿ ಅಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ, ``ನಮ್ಮ ಮಾಜಿ ಪ್ರಧಾನಿಯ ನೆನಪನ್ನು ಸಂರಕ್ಷಿಸಿದ್ದಕ್ಕೆ ತಾಷ್ಕೆಂಟ್ ಹಾಗೂ ಉಜ್ಬೇಕಿಸ್ತಾನದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ'' ಎಂದರು . ಜತೆಗೆ ಶಾಸ್ತ್ರಿ ಅವರು ಭಾರತದ ಹೆಮ್ಮೆಯ ಪುತ್ರ ಎಂದು ಬಣ್ಣಿಸಿದರು. ಹಿಂದಿಯ ಮಹತ್ವ ಹೆಚ್ಚಲಿದೆ: ತಾಷ್ಕೆಂಟ್ ನಲ್ಲಿ ಹಿಂದಿ ಭಾಷಾ ವಿದ್ಯಾರ್ಥಿಗಳು ಹಾಗೂಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ``ಯಾವುದೇ ದೇಶದ ಭಾಷೆಯ ಜನಪ್ರಿಯತೆ ತೆಯು ಆ ದೇಶದ ಆರ್ಥಿಕ ಅಭಿವೃದ್ಧಿಯನ್ನು ಅವಲಂಬಿಸಿದೆ. ಅದರಂತೆ, ಭಾರತವು ಈಗ ಆರ್ಥಿಕ ಸಮೃದ್ಧಿಯತ್ತ ಸಾಗುತ್ತಿರುವ ಕಾರಣ ಶೀಘ್ರದಲ್ಲೇ ಹಿಂದಿ ಭಾಷೆಯು ಮಹತ್ವ ಪಡೆಯಲಿದೆ, ಎಂದಿದ್ದಾರೆ. ಜತೆಗೆ ದೇಶಗಳ ನಡುವಿನ ಸಂಬಂಧ ಹೆಚ್ಚಾಗಲು ಜನರಲ್ಲಿನ ಪರಸ್ಪರ ಸಂಪರ್ಕವೇ ಅಡಿಪಾಯ. ಇದರಲ್ಲಿ ಭಾಷೆ ಮತ್ತು ಸಂಸ್ಕೃತಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಅವರು ಹೇಳಿದ್ದಾರೆ.
Advertisement