ಶ್ರೀನಗರದಲ್ಲಿ ಜು.17 ರಂದು ಪ್ರಧಾನಿ ಮೋದಿ ಇಫ್ತಾರ್ ಕೂಟ ಆಯೋಜನೆ ಸಾಧ್ಯತೆ

ಕೇಂದ್ರ ಏಶಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್ಸಾದ ನಂತರ ಶ್ರೀನಗರದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಸಾಧ್ಯತೆ ಇದೆ.
ಮುಸ್ಲಿಂ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಮುಸ್ಲಿಂ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಏಶಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್ಸಾದ ನಂತರ  ಶ್ರೀನಗರದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಸಾಧ್ಯತೆ ಇದೆ.

ಮಾಜಿ ಸಂಸದ,ಸಚಿವ ಗಿರಿಧಾರಿ ಲಾಲ್ ದೋಗ್ರಾರ ಜನ್ಮಶತಮಾನೋತ್ಸವವನ್ನು ಆಚರಣೆಯಲ್ಲಿ ಭಾಗವಹಿಸಲು ಜು.17 ರಂದು ಜಮ್ಮುಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ವೇಳೆ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೂ ಭೇಟಿ ನೀಡಿ ರಂಜಾನ್ ಅಂಗವಾಗಿ ಉಪವಾಸ ಆಚರಣೆ ಮಾಡುತ್ತಿರುವ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.    

ಜು.18 ಅಥವಾ 19 ರಂದು ಮುಸ್ಲಿಮರ ಈದ್-ಉಲ್-ಫಿತರ್ ಹಬ್ಬದ ಆಚರಣೆ ನಡೆಯಲಿದ್ದು, ಇದಕ್ಕೂ ಹಿಂದಿನ ದಿನ ಜು.೧೭(ಶುಕ್ರವಾರ)ದಂದು ಪ್ರಧಾನಿ ಮೋದಿ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.  ಕಳೆದ ವರ್ಷ ದಿಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀನಗರಕ್ಕೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರೊಂದಿಗೆ ದೀಪಗಳ ಹಬ್ಬವನ್ನು ಆಚರಿಸಿದ್ದರು. ಈಗ ಅದೇ ಮಾದರಿಯಲ್ಲಿ ರಂಜಾನ್ ಆಚರಿಸುತ್ತಿರುವವರಿಗೆ ಮೋದಿ ಇಫ್ತಾರ್ ಕೂಟ ಆಯೋಜಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com