
ಹೈದರಾಬಾದ್: ಡಮಾಸ್ಕಸ್‍ನ ಗೆಳೆಯರ ನೆರವಿಂದ ಶೀಘ್ರ ಜೈಲಿಂದ ಹೊರಗೆ ಬರುತ್ತೇನೆ ಎಂದು ಪತ್ನಿಗೆ ಫೋನ್ ಮೂಲಕ ತಿಳಿಸಿದ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ್ ಹೊಸ ಬೇಡಿಕೆ ಮಂಡಿಸಿದ್ದಾನೆ. ಆತನ ಜೀವಕ್ಕೆ ಬೆದರಿಕೆ ಇರುವುದರಿಂದ ಆತನನ್ನು 24 ಗಂಟೆಗಳ ಕಾಲ ಸಿಸಿಟಿವಿ ವ್ಯವಸ್ಥೆ ಇರುವ ಜೈಲಲ್ಲಿ ಇರಿಸಬೇಕು. ಶುದ್ಧ ಕುಡಿವ ನೀರು, ಗಾಳಿ ಮತ್ತು ಸೂರ್ಯನ ಬೆಳಕು ಇರುವ ಸೆಲ್‍ನಲ್ಲಿ ಇರಿಸಬೇಕೆಂದು ಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಎನ್‍ಡಿಟಿವಿ ಸುದ್ದಿವಾಹಿನಿ ವರದಿ ಮಾಡಿದೆ. ಸದ್ಯ ಹೈದರಾಬಾದ್‍ನ ಚೇರ್ಲಪಲ್ಲಿ ಕಾರಾಗೃಹ ದಲ್ಲಿರುವ ಏಳು ಅಡಿ ಉದ್ದ ಏಳು ಅಡಿ ಅಗ ಲದ ಸೆಲ್‍ನಲ್ಲಿ ಅಂಥ ಯಾವುದೇ ವ್ಯವಸ್ಥೆ ಇಲ್ಲ ಎಂದು ಭಟ್ಕಳ್‍ನ ವಕೀಲ ಶೇಕ್ ಸೈಫು ಲ್ಲಾ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಜತೆಗೆ ತಮ್ಮ ಕಕ್ಷಿದಾರನನ್ನು ಜೈಲಿನಿಂದ ಕೋರ್ಟ್ ಗೆ, ಅಲ್ಲಿಂದ ಜೈಲಿಗೆ ಕರೆದೊಯ್ಯುವಾಗ ಈಗಿನಿಂತ ಹೆಚ್ಚು ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Advertisement