ಮಂಗಕ್ಕೆ ಆಹಾರ ನೀಡಿದರೆ ಇನ್ನುಮುಂದೆ 3 ವರ್ಷ ಜೈಲು

ಮಂಗಕ್ಕೆ ಆಹಾರ ನೀಡಿದರೆ ಮೂರು ವರ್ಷ ಜೈಲಾ...! ಅರೆ ಇದೇನಿದು ಹಸಿದ ಪ್ರಾಣಿಗೆ ಆಹಾರ ನೀಡಿದರೂ ತಪ್ಪಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಬಹುದು...ಈ ರೀತಿಯ ಆದೇಶವೊಂದನ್ನು ನೀಡುರುವುದ ಉತ್ತರಾಖಂಡ್ ಸರ್ಕಾರ...
ಮಂಗಕ್ಕೆ ಆಹಾರ ನೀಡಿದರೆ ಇನ್ನುಮುಂದೆ 3 ವರ್ಷ ಜೈಲು (ಸಾಂದರ್ಭಿಕ ಚಿತ್ರ)
ಮಂಗಕ್ಕೆ ಆಹಾರ ನೀಡಿದರೆ ಇನ್ನುಮುಂದೆ 3 ವರ್ಷ ಜೈಲು (ಸಾಂದರ್ಭಿಕ ಚಿತ್ರ)

ಡೆಹ್ರಾಡೂನ್: ಮಂಗಕ್ಕೆ ಆಹಾರ ನೀಡಿದರೆ ಮೂರು ವರ್ಷ ಜೈಲಾ...! ಅರೆ ಇದೇನಿದು ಹಸಿದ ಪ್ರಾಣಿಗೆ ಆಹಾರ ನೀಡಿದರೂ ತಪ್ಪಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಬಹುದು...ಈ ರೀತಿಯ ಆದೇಶವೊಂದನ್ನು ನೀಡುರುವುದ ಉತ್ತರಾಖಂಡ್ ಸರ್ಕಾರ.

ಉತ್ತರ್ ಖಂಡ್ ನಾದ್ಯಂತ ಇತ್ತೀಚೆಗೆ ಮಂಗಗಳ ಹಾವಳಿ ಹೆಚ್ಚಾಗುತ್ತಿರುವ ಕಾರಣ ರೋಸಿಹೋಗಿರುವ ಅಲ್ಲಿನ ಸರ್ಕಾರ ಮಂಗಗಳಿಗೆ ಆಹಾರ ನೀಡಬಾರದು, ನೀಡಿದರೆ ಮೂರು ವರ್ಷ ಜೈಲು ಶಿಕ್ಷೆ ನೀಡಬೇಕಾಗುತ್ತದೆ ಎಂಬ ಆದೇಶ ಹೊರಡಿಸಿದೆ.

ಈ ಕುರಿತಂತೆ ಮಾತನಾಡಿರುವ ವನ್ಯಜೀವಿ ರಕ್ಷಣೆಯ ಮುಖ್ಯಸ್ಥ ಡಿವಿಎಸ್ ಖಟಿ ಅವರು, ಇತ್ತೀಚಿನ ದಿನಗಳಲ್ಲಿ ಜನರು ದೇವಸ್ಥಾನ, ಮನೆ, ರಸ್ತೆ ಹಾಗೂ ಎಲ್ಲಿಯೇ ಪ್ರಾಣಿಗಳನ್ನು ನೋಡಿದರೂ ಅವುಗಳಿಗೆ ಆಹಾರ ನೀಡುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಗಳು ಇದೀಗ ಕಾಡು ಬಿಟ್ಟು ನಾಡಿನ ಕಡೆ ತಮ್ಮ ಹೆಜ್ಜೆ ಹಾಕುತ್ತಿವೆ. ಇದರಿಂದಾಗಿ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶಾಂತಿಯುತ ಸಾರ್ಜಜನಿಕರ ಜೀವನಕ್ಕೆ ತೊಂದರೆಯುಂಟಾಗುತ್ತಿರುವ ಹಿನ್ನೆಯಲ್ಲಿ ಮಂಗಗಳಿಗೆ ಆಹಾರ ನೀಡುವ ವೇಳೆ ಸಿಕ್ಕಿ ಬೀಳುವ ಜನರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com