
ನವದೆಹಲಿ: ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿರುವ ಇರಾ ಸಿಂಘಾಲ್ ಅವರನ್ನು ಅಂಗವಿಕಲರ ಸಬಲೀಕರಣ ಇಲಾಖೆಯ ರಾಯಭಾರಿಯನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.
ವಿಕಲಚೇತನ ಐಆರ್‌ಎಸ್ ಅಧಿಕಾರಿ ಇರಾ ಸಿಂಘಾಲ್ ಅವರನ್ನು ಸನ್ಮಾನಿಸಿದ ಕೇಂದ್ರ ಸಚಿವ ಚಾಂದ್ ಗೆಹ್ಲೊಟ್ ಅವರು, ದೇಶದ ಯುವಜನತೆಯಲ್ಲಿ ಸ್ಫೂರ್ತಿ ಮೂಡಿಸಲು ಹಾಗೂ ಅವರಿಂದ ಸಾಧನೆಗಳನ್ನು ಹೊರ ತರಲು ಸಿಂಘಾಲ್ ಅವರನ್ನು ರಾಯಭಾರಿಯನ್ನಾಗಿ ನೇಮಿಸುವ ಆಲೋಚನೆ ಇರುವುದಾಗಿ ತಿಳಿಸಿದರು.
ಇದೇ ವೇಳೆ, ಐಎಎಸ್ ಪರೀಕ್ಷೆಗೆ ಕೂರಬಯಸುವ ಅಂಗವಿಕಲ ವ್ಯಕ್ತಿಗಳಿಗೆ ಸೂಕ್ತ ಅನುಕೂಲ ಕಲ್ಪಿಸುವ ಬೇಡಿಕೆ ಮುಂದಿಟ್ಟ ಸಿಂಘಾಲ್‌ರಿಗೆ, ಇಲಾಖೆಯ ಕಾರ್ಯದರ್ಶಿ ಲೋವ್ ವರ್ಮಾ ಭರವಸೆ ನೀಡಿದರು.
ಈ ವರ್ಷದ ಐಎಎಸ್ ಪರೀಕ್ಷೆಯ ರ್ಯಾಂಕ್ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದಿದ್ದಾರೆ.
Advertisement