ಬಾಂಬ್ ಬೆದರಿಕೆ: ಜೆಟ್ ಏರ್ವೇಸ್ ವಿಮಾನ ಮಸ್ಕತ್ ನಲ್ಲಿ ತುರ್ತು ಭೂಸ್ಪರ್ಶ

ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಜೆಟ್ ಏರ್ವೇಸ್ ವಿಮಾನವು ಮಸ್ಕತ್ ವಿಮಾನ ನಿಲ್ದಾಣದಲ್ಲು ಗುರುವಾರ ತುರ್ತು ಭೂಸ್ಪರ್ಶ ಮಾಡಿರುವುದಾಗಿ ತಿಳಿದುಬಂದಿದೆ...
ಜೆಟ್ ಏರ್ವೇಸ್ ವಿಮಾನ (ಸಂಗ್ರಹ ಚಿತ್ರ)
ಜೆಟ್ ಏರ್ವೇಸ್ ವಿಮಾನ (ಸಂಗ್ರಹ ಚಿತ್ರ)

ನವದೆಹಲಿ: ವಿಮಾನದಲ್ಲಿಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಜೆಟ್ ಏರ್ವೇಸ್ ವಿಮಾನವು ಮಸ್ಕತ್ವಿಮಾನ ನಿಲ್ದಾಣದಲ್ಲು ಗುರುವಾರ ತುರ್ತು ಭೂಸ್ಪರ್ಶ ಮಾಡಿರುವುದಾಗಿ ತಿಳಿದುಬಂದಿದೆ.

ಜೆಟ್ಏರ್ವೇಸ್9w 536 ವಿಮಾನವು ಮುಂಬೈ ನಿಂದ ದುಬೈಗೆ ಹೋಗುತ್ತಿದ್ದು, ವಿಮಾನಟೇಕ್ ಆಫ್ ಆದ ಸಂದರ್ಭದಲ್ಲಿ ಭಾರತ ಗುಪ್ತಚರ ಇಲಾಖೆಯು ವಿಮಾನ ಅಧಿಕಾರಿಗಳಿಗೆ ಬಾಂಬ್ ಇಟ್ಟಿರುವಶಂಕೆ ಇರುವುದಾಗಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಸ್ಕತ್ ಪ್ರದೇಶದಲ್ಲಿ ವಿಮಾನವುಇಂದು ಮಧ್ಯಾಹ್ನ 1.20ರ ಸುಮಾರಿಗೆ ತುರ್ತು ಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.

ವಿಮಾನದಲ್ಲಿಸಿಬ್ಬಂದಿ ಸೇರಿ 31 ಮಂದಿ ಪ್ರಯಾಣಿಸುತ್ತಿದ್ದರು. ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿಮಸ್ಕತ್ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ಬಂದೋಬಸ್ತ್ ಮಾಡಲಾಗಿದೆ. ಇನ್ನುಳಿದಂತೆ ವಿಮಾನ ನಿಲ್ದಾಣದಲ್ಲಿ ಎನ್ಎಸ್ ಜಿ ಸಿಬ್ಬಂದಿ ಸೇರಿದಂತೆಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

ಜೆಟ್ಏರ್ವೇಸ್ ವಿಮಾನವನ್ನು ಮಸ್ಕತ್ ವಿಮಾನನಿಲ್ದಾಣದಲ್ಲಿ ಪ್ರತ್ಯೇಕ ಜಾಗದಲ್ಲಿ ಲ್ಯಾಂಡ್ ಮಾಡಲಾಗಿದ್ದು, ಎನ್ ಎಸ್ ಜಿಯ ಶ್ವಾನ ಪಡೆ, ಬಾಂಬ್ ನಿಷ್ಕ್ರಿಯ ದಳ, ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಇದೇ ರೀತಿಯ ಟರ್ಕಿಶ್ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದು ವಿಮಾನವನ್ನು ದೆಹಲಿಯ ಇಂದಿರಾಗಾಂಧಿಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ತನಿಖೆ ನಂತರ ಇದೊಂದುಹುಸಿ ಬಾಂಬ್ ಬೆದರಿಕೆ ಕರೆ ಎಂದು ತಿಳಿದುಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com