ಶೀಘ್ರದಲ್ಲೇ ಸಮಾನ ವೇತನ, ಸಮಾನ ಪಿಂಚಣಿ ಜಾರಿ: ಮನೋಹರ್ ಪರಿಕ್ಕರ್

ಮಾಜಿ ಯೋಧರ ಹೋರಾಟಕ್ಕೆ ಇಂದು ಫಲ ದೊರಕಿದ್ದು, ಶೀಘ್ರದಲ್ಲೇ ಸಮಾನ ವೇತನ ಹಾಗೂ ಸಮಾನ ಪಿಂಚಣಿಯನ್ನು ಜಾರಿ ಮಾಡುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗುರುವಾರ ಹೇಳಿದ್ದಾರೆ...
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ನವದೆಹಲಿ: ಮಾಜಿ ಯೋಧರ ಹೋರಾಟಕ್ಕೆ ಇಂದು ಫಲ ದೊರಕಿದ್ದು, ಶೀಘ್ರದಲ್ಲೇ ಸಮಾನ ವೇತನ ಹಾಗೂ ಸಮಾನ ಪಿಂಚಣಿಯನ್ನು ಜಾರಿ ಮಾಡುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಇಂದು ಮಾತನಾಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಒಆರ್‌ಒಪಿ ಜಾರಿ ಸಂಬಂಧ ಸರ್ಕಾರ ಈಗಾಗಲೇ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಯೋಜನೆ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಜಾರಿಯಾಗುವ ಒಆರ್‌ಒಪಿ ಯೋಜನೆಯಲ್ಲಿ ಜಾರಿಯಾಗುವ ವೇತನ ಹಾಗೂ ಪಿಂಚಣಿಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ಹಿಂದೆ ನಿವೃತ್ತರಾದ ಯೋಧರಿಗೂ ಪ್ರಸ್ತುತ ನಿವೃತ್ತಿಗೊಳ್ಳುವ ಯೋಧರಿಗೂ ಸಮಾನ ವೇತನ ಹಾಗೂ ಪಿಂಚಣಿ ಜಾರಿಯಾಗಲಿದೆ. ಈ ಹಿಂದೆಯೇ ನಿವೃತ್ತರಾಗಿರುವ ಯೋಧರಿಗೆ ಹೊಸ ಯೋಜನೆಯ ಅನ್ವಯ ಪಿಂಚಣಿಯಾಗಲಿದ್ದು, 25 ಲಕ್ಷ ಮಾಜಿ ಯೋಧರಿಗೆ ಯೋಜನೆ ತಲುಪಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಸಮಾನ ವೇತನ ಹಾಗೂ ಸಮಾನ ಪಿಂಚಣಿ (ಒಆರ್‌ಒಪಿ)ಯೋಜನೆಯನ್ನು ಜಾರಿಗೆ ತರಲು ವಿಳಂಬ ನೀತಿ ಮಾಡುತ್ತಿರುವುದನ್ನು ವಿರೋಧಿಸಿ ನಿವೃತ್ತ ಯೋಧರು ಹಲವು ವರ್ಷಗಳಿಂದಲೂ ಹೋರಾಟ ಮಾಡಿತ್ತಲ್ಲದೆ, ಜೂನ್ 14 ರಂದು ಬೃಹತ್ ಪ್ರತಿಭಟನೆ ಮಾಡಿತ್ತು. ಸಮಾನ ವೇತನ ಹಾಗೂ ಸಮಾನ ಪಿಂಚಣಿ ಜಾರಿ ಕುರಿತಂತೆ ವಿರೋಧ ಪಕ್ಷಗಳಿಂದಲೂ ಸಹ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com