ಎಲ್‌ಪಿಜಿ ಸಬ್ಸಿಡಿ ತೊರೆದ ಗ್ರಾಹಕರ ಸಂಖ್ಯೆ 10 ಲಕ್ಷ

ಟಿವಿ, ರೇಡಿಯೋ ಮೊದಲಾದ ಸಮೂಹ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ನಂತರದ ದೇಶಾದ್ಯಂತ ಸುಮಾರು 10 ಲಕ್ಷ ಗ್ರಾಹಕರು ಎಲ್‌ಪಿಜಿ ಸಬ್ಸಿಡಿ...
ಎಲ್‌ಪಿಜಿ ಸಿಲಿಂಡರ್
ಎಲ್‌ಪಿಜಿ ಸಿಲಿಂಡರ್
Updated on

ಚೆನ್ನೈ: ಟಿವಿ, ರೇಡಿಯೋ ಮೊದಲಾದ ಸಮೂಹ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ನಂತರದ ದೇಶಾದ್ಯಂತ ಸುಮಾರು 10 ಲಕ್ಷ ಗ್ರಾಹಕರು ಎಲ್‌ಪಿಜಿ ಸಬ್ಸಿಡಿ ತೊರೆದಿದ್ದಾರೆ.

ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಾದ  ಉತ್ತರ ಪ್ರದೇಶದಲ್ಲಿ ಈವರೆಗೆ ಸುಮಾರು 2.09 ಲಕ್ಷ ಗ್ರಾಹಕರು ಸಬ್ಸಿಡಿ ತೊರೆದಿದ್ದಾರೆ. ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಇಲ್ಲಿ  78,307 ಗ್ರಾಹಕರು ಸಬ್ಸಿಡಿ ನಿರಾಕರಿಸಿದ್ದಾರೆ. ದೇಶಾದ್ಯಂತ ಕನಿಷ್ಠ 1 ಕೋಟಿ ಗ್ರಾಹಕರು ಸಬ್ಸಿಡಿ ತ್ಯಜಿಸುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.

ಸಾರ್ವಜನಿಕ ವಲಯದ ಮೂರು ಪ್ರಮುಖ ಪೆಟ್ರೋಲಿಯಂ ಸಂಸ್ಥೆಗಳಾದ ಇಂಡಿಯನ್‌ ಆಯಿಲ್‌ (ಇಂಡೇನ್‌) ಭಾರತ್‌ ಪೆಟ್ರೋಲಿಯಂ (ಭಾರತ್ ಗ್ಯಾಸ್‌), ಹಿಂದೂಸ್ಥಾನ್‌ ಪೆಟ್ರೋಲಿಯಂ (ಎಚ್‌ಪಿ ಗ್ಯಾಸ್‌)ನ ಒಟ್ಟು ಎಲ್‌ಪಿಜಿ ಗ್ರಾಹಕರ ಸಂಖ್ಯೆ 15.3ಕೋಟಿ. ಪ್ರತಿ ಗ್ರಾಹಕರು ಒಂದು ವರ್ಷದಲ್ಲಿ ಪಡೆಯುವ 12 ಸಿಲಿಂಡರ್‌ಗಳ ಸಬ್ಸಿಡಿ ಮೊತ್ತ 40,000 ಕೋಟಿ ರು.ಆಗಿದೆ

ಟಿವಿ ಹಾಗೂ ಸಿಲಿಂಡರ್‌ ಕಾಯ್ದಿರಿಸಲು ಕರೆ ಮಾಡುವ ಸಂದರ್ಭದಲ್ಲಿ ಕೇಳಿ ಬರುವ ಇಂಟರಾಕ್ಟೀವ್‌ ವಾಯ್ಸ್‌ ರೆಸ್ಪಾನ್ಸ್‌ ಮೂಲಕ ಸಬ್ಸಿಡಿ ಕೈ ಬಿಡುವಂತೆ ಮಾಡುವ ಸರ್ಕಾರದ ಮನವಿಗೆ ಸ್ಪಂದಿಸಿ ಸುಮಾರು 10 ಲಕ್ಷ ಮಂದಿ ಸಬ್ಸಿಡಿ ಸಿಲಿಂಡರ್‌ ಬೇಡ ಎಂದಿದ್ದಾರೆ.

ಸಬ್ಸಿಡಿ ನಿರಾಕರಣೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು,  ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸುಮಾರು 2.16 ಲಕ್ಷ ಮಂದಿ ಸಬ್ಸಿಡಿ ತೊರೆದಿದ್ದಾರೆ. ಕರ್ನಾಟಕದ ನಂತರ ತಮಿಳುನಾಡಿನ 67,096 ಗ್ರಾಹಕರು ಹಾಗು ಆಂಧ್ರ ಪ್ರದೇಶದ 31,711 ಗ್ರಾಹಕರು ಸಬ್ಸಿಡಿ ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com