ಭಾರತ-ತುರ್ಕ್‌ಮೆನಿಸ್ತಾನ್ ಬಾಂಧವ್ಯ ವೃದ್ಧಿಗೆ ಸಂಪರ್ಕ ಪ್ರಮುಖ ಅಂಶ: ಮೋದಿ

ಭಾರತ ಮತ್ತು ತುರ್ಕ್‌ಮೆನಿಸ್ತಾನ ನಡುವಿನ ಬಾಂಧವ್ಯ ವೃದ್ಧಿಗೆ ಸಂಪರ್ಕ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ನರೇಂದ್ರ ಮೋದಿ - ಗುರ್ಬಾನ್ ಗುಲಿಬೆರಡಿ
ನರೇಂದ್ರ ಮೋದಿ - ಗುರ್ಬಾನ್ ಗುಲಿಬೆರಡಿ

ಅಶ್‌ಗಾಬಾದ್: ಭಾರತ ಮತ್ತು ತುರ್ಕ್‌ಮೆನಿಸ್ತಾನ ನಡುವಿನ ಬಾಂಧವ್ಯ ವೃದ್ಧಿಗೆ ಸಂಪರ್ಕ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ಇಂದು ತುರ್ಕ್‌ಮೆನಿಸ್ತಾನ ಅಧ್ಯಕ್ಷ ಗುರ್ಬಾನ್ ಗುಲಿಬೆರಡಿ ಅವರೊಂದಿಗೆ ನಡೆದ ಮಹತ್ವದ ಮಾತುಕತೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಗೆ ಸಂಪರ್ಕ ಪ್ರಮುಖ ಅಂಶವಾಗಿದೆ ಎಂದರು.

'ನಾವು ಇರಾನ್ ಮೂಲಕ ಬಂದರೆ ಕೇಂದ್ರ ಏಷ್ಯಾದಲ್ಲಿ ಸಿಗುವ ಮೊದಲ ರಾಜಧಾನಿಯೇ ಅಶ್‌ಗಾಬಾದ್‌' ಎಂದು ಮೋದಿ ಹೇಳಿದರು. ಅಲ್ಲದೆ ಭಯೋತ್ಪಾನದೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳು ಸಮಾನ ಧೋರಣೆ ಹೊಂದಿವೆ. ನನ್ನ ಭೇಟಿಯಿಂದ ಭಾರತ-ತುರ್ಕ್‌ಮೆನಿಸ್ತಾನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.

ಇದೇ ವೇಳೆ ಉಭಯ ರಾಷ್ಟ್ರಗಳ ನಾಯಕರು ಕ್ರೀಡೆ, ಪ್ರವಾಸೋದ್ಯಮ, ರಸಗೊಬ್ಬರ, ಬಾಹ್ಯಕಾಶ, ವಿಜ್ಞಾನ ತಂತ್ರಜ್ಞಾನ ಹಾಗೂ ರಕ್ಷಣಾ ವಲಯ ಸೇರಿದಂತೆ ಏಳು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com