ಇಸ್ರೋ ರಾಕೆಟ್ ಯಶಸ್ವಿ ಉಡಾವಣೆ

ಐದು ಬ್ರಿಟಿಷ್ ಉಪಗ್ರಹ ಗಳನ್ನು ಹೊತ್ತ ಇಸ್ರೋದ ರಾಕೆಟ್ ಯಶಸ್ವಿಯಾಗಿ ಕಕ್ಷೆ ಸೇರಿದೆ. ಶುಕ್ರವಾರ ರಾತ್ರಿ ಸರಿಯಾಗಿ 9.58ಕ್ಕೆ ಬ್ರಿಟನ್ 5 ಉಪಗ್ರಹಗಳನ್ನು...
ಪಿಎಸ್‍ಎಲ್‍ವಿ ಉಡಾವಣೆ (ಕೃಪೆ : ಪಿಟಿಐ)
ಪಿಎಸ್‍ಎಲ್‍ವಿ ಉಡಾವಣೆ (ಕೃಪೆ : ಪಿಟಿಐ)

ನವದೆಹಲಿ: ಐದು ಬ್ರಿಟಿಷ್ ಉಪಗ್ರಹ ಗಳನ್ನು ಹೊತ್ತ ಇಸ್ರೋದ ರಾಕೆಟ್ ಯಶಸ್ವಿಯಾಗಿ ಕಕ್ಷೆ ಸೇರಿದೆ. ಶುಕ್ರವಾರ ರಾತ್ರಿ ಸರಿಯಾಗಿ 9.58ಕ್ಕೆ ಬ್ರಿಟನ್ 5 ಉಪಗ್ರಹಗಳನ್ನು ಹೊತ್ತ ಬಾಹ್ಯಾಕಾಶ ನೌಕೆ  ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರ ದಿಂದ ನಭಕ್ಕೆ ಚಿಮ್ಮಿತು.
15 ಮಹಡಿಯ ಕಟ್ಟಡದಷ್ಟು ಎತ್ತರದ ರಾಕೆಟ್  320 ಟನ್ ತೂಕವಿತ್ತು. ಈ ರಾಕೆಟ್ 1440 ಕೆಜಿ ತೂಕದ ಬ್ರಿಟಿಷ್ ಉಪಗ್ರಹಗಳನ್ನುಹೊತ್ತು ಸಾಗಿದ್ದು, ಇಷ್ಟೊಂದು ಭಾರದ ವಾಣಿಜ್ಯ ಉಡಾವಣೆ ಭಾರತದಲ್ಲಿ ಇದೇ  ಮೊದಲು ಎಂದು ಬಾಹ್ಯಾಕಾಶ ಕೇಂದ್ರ ತಿಳಿಸಿದೆ. ಇದು ಭಾರತದ  ಪಿಎಸ್‍ಎಲ್‍ವಿಯ 30ನೇ ಉಡಾವಣೆಯಾಗಿದೆ. ವಾಣಿಜ್ಯ ದೃಷ್ಟಿಯಿಂದ ಇಸ್ರೋ ಪಾಲಿಗಿದು ಮಹತ್ವದ ಉಡ್ಡಯನ. ಈ ಮೂಲಕ ಇಸ್ರೋ ಮುಂದಿನ ದಿನಗಳಲ್ಲಿ ಬಹುಕೋಟಿ ಮೊತ್ತದ ಉಪಗ್ರಹ ಉಡ್ಡಯನ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ. ``ನಮ್ಮ ಗ್ರಾಹಕ, ಬ್ರಿಟನ್ ನ ಸರ್ ಟೆಕ್ನಾಲಜೀಸ್ ಗಾಗಿ  ಈ ವಿಶೇಷ ವಾಣಿಜ್ಯ ಉಡಾವಣೆ ನಡೆಸಲಾಯಿತು ಎಂದು ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ನುಡಿದಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com