ಸಶಸ್ತ್ರಪಡೆ ಕಡಿತಕ್ಕೆ ರಾಜನಾಥ್ ಚಿಂತನೆ

ಈಶಾನ್ಯಭಾರತದಲ್ಲಿ ರಕ್ಷಣಾವ್ಯವಸ್ಥೆಯಲ್ಲಿ ಈಗಾಗಲೇ ಸುಧಾರಣೆ ಕಂಡಿರುವುದರಿಂದ ಅಲ್ಲಿರುವ ಕೇಂದ್ರ ರಕ್ಷಣಾಪಡೆಗಳ ಸಂಖ್ಯೆ ಕಡಿಮೆಮಾಡಬಹುದು...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಗುವಾಹಟಿ: ಈಶಾನ್ಯಭಾರತದಲ್ಲಿ ರಕ್ಷಣಾವ್ಯವಸ್ಥೆಯಲ್ಲಿ ಈಗಾಗಲೇ ಸುಧಾರಣೆ ಕಂಡಿರುವುದರಿಂದ ಅಲ್ಲಿರುವ ಕೇಂದ್ರ ರಕ್ಷಣಾಪಡೆಗಳ ಸಂಖ್ಯೆ ಕಡಿಮೆಮಾಡಬಹುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ``ರಾಜ್ಯಾದ್ಯಂತ ಆಂತರಿಕ ಗಲಭೆಗಳು ಅತಿಯಾಗಿದ್ದ ಕಾಲದಲ್ಲಿ ಇಷ್ಟೊಂದು ತುಕಡಿಗಳು ಇರಲಿಲ್ಲ. ಈಗ ಪರಿಸ್ಥಿತಿ ತುಂಬ ಸುಧಾರಿಸಿರುವುದರಿಂದ ಇಷ್ಟೊಂದು ಸೈನಿಕರ ಅಗತ್ಯವಿಲ್ಲ'' ಎಂದು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ರಾಜನಾಥ್ ಹೇಳಿದ್ದಾರೆ. ಈಶಾನ್ಯರಾಜ್ಯದ ಎಲ್ಲ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿನ ಸಶಸ್ತ್ರಪಡೆಯ ನೈಜ ಚಿತ್ರಣ ಹಾಗೂ ಲೆಕ್ಕ ನೀಡಿದಲ್ಲಿ, ಅಗತ್ಯವಿರುವಷ್ಟು ರಕ್ಷಣಾಪಡೆಯನ್ನು ನೀಡುವ ಭರವಸೆ ಸಚಿವರು ನೀಡಿದ್ದಾರೆ. ಹಾಗಂತ ರಕ್ಷಣಾ ವಿಚಾರದಲ್ಲಿ ಯಾವುದೇ ರಾಜಿಗೂ ಸಿದ್ಧವಿಲ್ಲವೆಂದು ಹೇಳಲು ಅವರು ಮರೆಯಲಿಲ್ಲ. ಆಂತರಿಕ ಗಲಭೆಗಳು ಕ್ಷೀಣಿಸಿರುವುದಕ್ಕೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ರಾಜನಾಥ್, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಗಲಭೆಗಳು ಹೆಚ್ಚೂಕಮ್ಮಿ ಸಂಪೂರ್ಣವಾಗಿ ನಿಂತೇ ಹೋಗಿವೆ ಎಂಬ ಮಾಹಿತಿ ಹಂಚಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com