ಗಮನಸೆಳೆದಿರುವ ಸೋನಿಯಾ ಗಾಂಧಿ ಇಫ್ತರ್ ಕೂಟ

ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿರುವ ಇಫ್ತರ್ ಕೂಟದಲ್ಲಿ ಕಾಂಗ್ರೆಸ್ ಹಾಗೂ ಅದರ ಮೈತ್ರಿಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ...
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿರುವ ಇಫ್ತರ್ ಕೂಟದಲ್ಲಿ ಕಾಂಗ್ರೆಸ್ ಹಾಗೂ ಅದರ ಮೈತ್ರಿಪಕ್ಷಗಳ ನಾಯಕರು ಭಾಗವಹಿಸಲಿದ್ದು, ಅಲ್ಲಿ ಜುಲೈ 21ರಂದು ಆರಂಭಗೊಳ್ಳಲಿರುವ ಸಂಸತ್ತು ಅಧಿವೇಶನದಲ್ಲಿ ಸರ್ಕಾರವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸುವುದು ಎಂಬ ಬಗ್ಗೆ ಕಾರ್ಯತಂತ್ರ ಹೆಣೆಯಲಿವೆ.

ಇದರಿಂದ ಇಫ್ತರ್ ಕೂಟಕ್ಕೆ ಭಾರೀ ಮಹತ್ವ ಬಂದಿದೆ. ಲಲಿತ್ ಮೋದಿ ವೀಸಾ ಪ್ರಕರಣ, ಮಧ್ಯಪ್ರದೇಶದ ವ್ಯಾಪಂ ಹಗರಣ ವಿಷಯದಲ್ಲಿ ನಲುಗಿ ಹೋಗಿರುವ ಮೋದಿ ಸರ್ಕಾರವನ್ನು ತೊಂದರೆಯಲ್ಲಿ ಸಿಕ್ಕಿಹಾಕಿಸುವುದು ಕಾಂಗ್ರೆಸ್ ನ ಉದ್ದೇಶವಾಗಿದೆ.

ಇಫ್ತರ್ ಕೂಟದಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಬಿಎಸ್ ಪಿಯ ಮಾಯಾವತಿ, ಎನ್ ಸಿಪಿಯ ಶರದ್ ಪವಾರ್, ಸಿಪಿಎಂನ ಸೀತಾರಾಮ್ ಯೆಚೂರಿ, ಜೆಡಿಎಸ್ ನ ಹೆಚ್.ಡಿ.ದೇವೇಗೌಡ, ಡಿಎಂಕೆಯ ಕನ್ನಿಮೋಜಿ, ಸಿಪಿಐನ ಡಿ.ರಾಜಾ, ಐಯು ಎಂಎಲ್ ನ ಇ.ಅಹ್ಮದ್, ನ್ಯಾಯಮೂರ್ತಿ ಫರೂಕ್ ಅಬ್ದುಲ್ಲಾ, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜೆಡಿಯು ಅಧ್ಯಕ್ಷ ಶರದ್ ಯಾದವ್  ಅವರಿಗೆ ಆಹ್ವಾನ ನೀಡಲಾಗಿದೆ.

ಮೋದಿ ಸರ್ಕಾರ ಲಲಿತ್ ಮೋದಿ ಪ್ರಕರಣ, ವ್ಯಾಪಂ ಹಗರಣ, ಸ್ಮೃತಿ ಇರಾನಿಯವರ ಶೈಕ್ಷಣಿಕ ಅರ್ಹತೆ, ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಪಂಕಜ್ ಮುಂಡೆ ಅವರ ಮೇಲೆ ಹಗರಣ ಪ್ರಕರಣದ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲಿ   ಇಫ್ತರ್ ಕೂಟಕ್ಕೆ ಕರೆದಿರುವುದು ರಾಜಕೀಯ ವಲಯದಲ್ಲಿ ಅನೇಕ ಚರ್ಚೆ, ಕುತೂಹಲಗಳಿಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com