ಅಮರನಾಥ ಯಾತ್ರೆ ಸ್ಥಗಿತ
ನವದೆಹಲಿ/ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ಪೆಹಲ್ ಗಾಂವ್‍ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಭಾನುವಾರ ದಿನವಿಡೀ ಭರ್ಜರಿ ಮಳೆಯಾಗಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿದ್ದು ಮಾಡಲಾಗಿದೆ. ಯಾತ್ರಿಗಳನ್ನು ಭಗವತಿ ನಗರದ ಬೇಸ್‍ಕ್ಯಾಂಪ್‍ಗೆ ತೆರಳುವಂತೆ ಸೂಚಿಸಲಾಗಿದೆ. ಮೂರು ಜನ ಸಾವು: ಕಳೆದ ವರ್ಷ ಸುರಿದ ಮಹಾಮಳೆಯಿಂದ ಚೇತರಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಂಡಿದ್ದು, ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮೇಘಸ್ಫೋಟದಿಂದ ಸಂಭವಿಸಿದ ಭೂಕುಸಿತದಲ್ಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಪತ್ತೆಯಾದ್ದಾರೆ.
ಉತ್ತರ ಭಾರತ ತತ್ತರ: ಕರಾವಳಿ ಜಿಲ್ಲೆಗಳನ್ನುಹೊರತುಪಡಿಸಿ ಕರ್ನಾಟಕದ ಬೇರಿನ್ನೆಲ್ಲೂಮುಂಗಾರು ಅಬ್ಬರ ಕಾಣಿಸುತ್ತಿಲ್ಲ. ಉತ್ತರ ಕರ್ನಾಟಕದ ಬಹುತೇಕ ಕಡೆ ಈಗಾಗಲೇ ಬರದ ಛಾಯೆ ಆರಂಭಿದೆ. ಆದರೆ, ಇಷ್ಟು ದಿನ ಬಿಸಿಲ ಧಗೆಯಿಂದ ಕಾದ ಕಬ್ಬಿಣದಂತಾಗಿದ್ದ ಉತ್ತರಭಾರತದಲ್ಲಿ ಮಾತ್ರ ಭರ್ಜರಿ ಮಳೆಯಾತ್ತಿದೆ. ರಾಜಧಾನಿ ದೆಹಲಿ, ಉತ್ತರ ಪ್ರದೇಶ ಸೇರಿ ಉತ್ತರ ಭಾರತದ ಬಹುತೇಕ ಕಡೆ ಭಾರಿ ಮಳೆಯಾತ್ತಿದೆ. ಮಳೆ ಸಂಬಂಧ ಅನಾಹುತಕ್ಕೆ ಭಾನುವಾರ 8 ಮಂದಿ ತಪಟ್ಟಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳದಲ್ಲೂ ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಉತ್ತರಪ್ರದೇಶದಲ್ಲಿ ಮನೆ ಕುಸಿದು ಏಳು ಮಂದಿ ಬಲಿಯಾಗಿದ್ದರೆ, ಉತ್ತರಾ ಖಂಡದ ಡೆಹ್ರಾಡೂನ್‍ನಲ್ಲಿ ರೆಸ್ಟೋರೆಂಟ್‍ವೊಂದು ಕುಸಿದು ಕೂಲಿಕಾರ್ಮಿಕ ಬಲಿಯಾಗಿದ್ದಾನೆ. ರಾಜಧಾನಿಯಲ್ಲಿ ಮತ್ತೆ ಮಳೆ: ರಾಜಧಾನಿ ದೆಹಲಿ ಯಲ್ಲಿ 4 ದಿನಗಳಿಂದ ಮಳೆಯಾಗುತ್ತಿದ್ದು, ಬಹುತೇಕ ಕಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ