ಗ್ರೀಸ್: ಯೂರೋ ಝೋನ್ ಸಭೆ ರದ್ದು

ಮಹಾ ಆರ್ಥಿಕ ಪತನದತ್ತ ಸಾಗುತ್ತಿರುವ ಗ್ರೀಸ್ ಅನ್ನು ಯೂರೋ ಝೋನ್‍ನಲ್ಲೇ ಉಳಿಸಿಕೊಳ್ಳಬೇಕೇ, ಬೇಡೆವೇ ಎನ್ನುವ ಕುರಿತು ನಿರ್ಧರಿಸುವ...
ಯುರೋ ಜೋನ್ ನಾಯಕರ(ಸಂಗ್ರಹ ಚಿತ್ರ)
ಯುರೋ ಜೋನ್ ನಾಯಕರ(ಸಂಗ್ರಹ ಚಿತ್ರ)
Updated on

ಬ್ರುಸ್ಸೆಲ್ಸ್/ಮಾಸ್ಕೋ/ನವದೆಹಲಿ: ಮಹಾ ಆರ್ಥಿಕ ಪತನದತ್ತ ಸಾಗುತ್ತಿರುವ ಗ್ರೀಸ್ ಅನ್ನು ಯೂರೋ ಝೋನ್‍ನಲ್ಲೇ ಉಳಿಸಿಕೊಳ್ಳಬೇಕೇ, ಬೇಡೆವೇ ಎನ್ನುವ ಕುರಿತು ನಿರ್ಧರಿಸುವ ಸಂಬಂಧ ಭಾನುವಾರ ನಡೆಯಬೇಕಿದ್ದ ಯುರೋಪಿನ 28 ರಾಷ್ಟ್ರಗಳ ಮಹತ್ವದ ಸಭೆಯನ್ನು ಐರೋಪ್ಯ ಒಕ್ಕೂಟ ರದ್ದು ಮಾಡಿದೆ.

ಗ್ರೀಕ್‍ನ ಮಹಾ ಆರ್ಥಿಕ ಪತನವನ್ನು ತಡೆಯುವ ನಿಟ್ಟಿನಲ್ಲಿ ಈ ಸಭೆ ಕೊನೆಯ ಅವಕಾಶ ಎಂದು ಬಿಂಬಿಸಲಾಗಿತ್ತು. ಆದರೆ, ಈ ಸಭೆಗೂ ಮುನ್ನ ಶನಿವಾರ ಯೂರೋಝೋನ್‍ನ ಹಣಕಾಸು ಸಚಿವರ ಮ್ಯಾರಥಾನ್ ಸಭೆಯಲ್ಲಿ ಗ್ರೀಸ್‍ಗೆ ಮತ್ತೊಂದು ಆರ್ಥಿಕ ನೆರವು
ನೀಡುವ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಸಭೆ ರದ್ದು ಮಾಡಲಾಗಿದೆ. ಈ ಸಭೆ ಭಾನುವಾರವೂ ಮುಂದುವರಿಯಲಿದೆ.

ಮಹಾ ಆರ್ಥಿಕ ಪತನದತ್ತ ಜಾರುತ್ತಿರುವ ಗ್ರೀಸ್‍ನ ಬ್ಯಾಂಕ್‍ಗಳು ಯಾವುದೇ ಕ್ಷಣದಲ್ಲಿ ದಿವಾಳಿಯಾಗುವ ಅಂಚಿಗೆ ತಲುಪಿವೆ. ಈಗಾಗಲೇ ಐರೋಪ್ಯ ಒಕ್ಕೂಟ ದಿವಾಳಿಯಂಚಿನಲ್ಲಿರುವ ಗ್ರೀಸ್‍ಗೆ 2010 ಮತ್ತು 2012ರಲ್ಲಿ 2 ಬಾರಿ 240 ಬಿಲಿಯನ್ ಯೂರೋ ಆರ್ಥಿಕ ನೆರವು ನೀಡಿದೆ. ಮೂರನೇ ಆರ್ಥಿಕ ನೆರವನ್ನು ಎದುರು
ನೋಡುತ್ತಿರುವ ಗ್ರೀಸ್ ಸರ್ಕಾರಕ್ಕೆ ಐರೋಪ್ಯ ಒಕ್ಕೂಟ ಒಂದಷ್ಟು ಕಠಿಣ ವೆಚ್ಚ ಕಡಿತ ನಿಯಮಗಳನ್ನು ಅನುಸರಿಸುವಂತೆ ಸೂಚಿಸಿತ್ತು. ಪಿಂಚಣಿ ಕಡಿ, ತೆರಿಗೆ ಹೆಚ್ಚಳ ಮತ್ತಿತರ ಕ್ರಮಗಳು ಸೇರಿದ್ದವು. ಆದರೆ, ಜನಮತ ಸಂಗ್ರಹದಲ್ಲಿ ಈ ಕ್ರಮಗಳನ್ನು ಜನ ತಿರಸ್ಕರಿಸಿದ್ದರು.

ನೆರವಿಗೆ ರಷ್ಯಾ: ದಿವಾಳಿ ಅಂಚಿಗೆ ತಲುಪಿರುವ ಗ್ರೀಸ್ ಅರ್ಥವ್ಯವಸ್ಥೆಗೆ ಚೇತರಿಕೆ ಈಗ ರಷ್ಯಾ ನೆರವಿನ ಹಸ್ತ ನೀಡಲು ಮುಂದೆ ಬಂದಿದೆ. ಗ್ರೀಸ್‍ಗೆ ನೇರವಾಗಿ ಇಂಧನ ಪೂರೈಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ರಷ್ಯಾದ ಹಣಕಾಸು ಸಚಿವ ಅಲೆಕ್ಸಾಂಡರ್ ನೋವಾಕ್
ಹೇಳಿದ್ದಾರೆ. ಗ್ರೀಸ್‍ನ ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ನೆರವು ನೀಡಲು ರಷ್ಯಾ ಸಿದ್ಧವಿದೆ. ಇಂಧನ ಕ್ಷೇತ್ರದಲ್ಲಿ ನೀಡುತ್ತಿರುವ ಸಹಕಾರವನ್ನು ದೇಶವು ಮತ್ತಷ್ಟು ವಿಸ್ತರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿ: ಭಾರತದ ಲಾಭರಹಿತ ಸಂಸ್ಥೆ ಟ್ರೆಸ್ಟರ್ ಫೌಂಡೇಷನ್ ಈಗ ಗ್ರೀಸ್ ಜನರ ನೆರವಿಗೆ ಕೈಜೋಡಿಸಲು ಮುಂದಾಗಿದೆ. ಪ್ರತಿ ಗ್ರೀಕ್ ನಾಗರಿಕರು 2 ಸಾವಿರದಷ್ಟು
ಯುರೋಗಳನ್ನು ವಚ್ರ್ಯುವಲ್ ಕರೆನ್ಸಿ ರೂಪದಲ್ಲಿ ಪಡೆದುಕೊಳ್ಳಲು ಈ ಸಂಸ್ಥೆ ಅವಕಾಶ ಮಾಡಿಕೊಡಲಿದೆ. ಇದಕ್ಕಾಗಿ ಜನ ವಾಗ್ದಾನ ಪತ್ರಕ್ಕೆ ಸಹಿಹಾಕಬೇಕಿದೆ. ಗ್ರೀಸ್ ಜನರಿಗೆ ಹಣಕಾಸು ನೆರವು ನೀಡುತ್ತಿರುವ ಏಕೈಕ ಅಂತಾರಾಷ್ಟ್ರೀಯ ಸಂಘಟನೆ ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com