
ಲಂಡನ್: ಉಗ್ರ ಸಂಘಟನೆ ಐಸಿಸ್ ಕ್ರೂರತೆ ಕುಖ್ಯಾತಿ ಪಡೆದುಕೊಂಡಿದೆ. ಇದೀಗ ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ.
ಈ ದೃಶ್ಯಾವಳಿಯಲ್ಲಿ 1,700ಕ್ಕೂ ಅಧಿಕ ಮಂದಿ ಯುವ ಕೆಡೆಟ್‍ಗಳನ್ನು ನಿರ್ದಯವಾಗಿ ಮೆಷಿನ್‍ಗನ್‍ನಿಂದ ಗುಂಡಿಕ್ಕಿ ಸಾಯಿಸುವ ಸಂದರ್ಭವಿದು. ಸಾಯುವುದಕ್ಕಿಂತ ಮೊದಲು ಅವರೆಲ್ಲ 'ದಮ್ಮಯ್ಯ. ನಮ್ಮನ್ನು ಬಿಟ್ಟುಬಿಡಿ' ಎಂದು ಗೋಗೆರೆಯುತ್ತಿರುವ ದೃಶ್ಯವಿದೆ.
ಇದೆಲ್ಲದರ ಹೊರತಾಗಿಯೂ ಅವರ ಕೈಗಳನ್ನು ಹಿಂದಕ್ಕೆ ಕಟ್ಟಿ, ನೆಲದಲ್ಲಿ ಮಲಗುವಂತೆ ಕಟ್ಟು ನಿಟ್ಟಿನ ಆಜ್ಞೆ ನೀಡಲಾಗುತ್ತದೆ. ಅಷ್ಟಾಗುತ್ತಲೇ ಉಗ್ರರ ಕೈಯ್ಯಲ್ಲಿರುವ ಗನ್‍ಗಳಿಂದ ಗುಂಡುಗಳು ಯುವ ಕೆಡೆಟ್‍ಗಳ ದೇಹ ಪ್ರವೇಶಿಸಿ, ರಕ್ತ ಛಿಲ್ಲನೆ ಮೇಲಕ್ಕೆ ಹಾರುತ್ತದೆ. ಈ ಹತ್ಯಾಕಾಂಡದ ಬಗ್ಗೆ 'ಡೈಲಿ ಮೈಲ್' ಭಾನುವಾರ ವರದಿ ಮಾಡಿದೆ.
ಅಂದ ಹಾಗೆ ಈ ಹತ್ಯಾಕಾಂಡ ನಡೆದದ್ದು ಕಳೆದ ವರ್ಷ. ಇರಾಕ್ ಟಿಕ್ರಿತ್ ನಗರದ ಸಮೀಪ ಈ ಹತ್ಯೆ ನಡೆದಿದೆ. ಇದಾದ ಬಳಿಕ ಒಬ್ಬಬ್ಬರನ್ನು ನದಿಗೆ ನಿರ್ದಾಕ್ಷಿಣ್ಯವಾಗಿ ಎಸೆಯುವುದನ್ನು
ವಿಡಿಯೋದಲ್ಲಿ ತೋರಿಸಲಾಗಿದೆ. ಅವರೆಲ್ಲ ಶಿಯಾ ವರ್ಗದ ಮುಸ್ಲಿಮರಿಗೆ ಸೇರಿದವರು. 22 ನಿಮಿಷಗಳ ವಿಡಿಯೋದಲ್ಲಿ ಅವೆಲ್ಲವನ್ನೂ ದಾಖಲಿಸಲಾಗಿದೆ. ಮತ್ತೊಂದೆಡೆ, ಲಿಬಿಯಾದಲ್ಲಿ
ನಡೆಯುತ್ತಿರುವ ಹೋರಾಟದಲ್ಲಿ ಕೈಸೋಲುತ್ತಿರುವ ಬಗ್ಗೆ ಉಗ್ರ ಸಂಘಟನೆ ಒಪ್ಪಿಕೊಂಡಿದೆ.
Advertisement