ಬಿಜೆಪಿ ಅಧ್ಯಕ್ಷ ಅಮಿತ್ ಷಾ
ಬಿಜೆಪಿ ಅಧ್ಯಕ್ಷ ಅಮಿತ್ ಷಾ

ಅಚ್ಚೆ ದಿನಗಳಿಗೆ 25 ವರ್ಷ ಕಾಯಬೇಕು: ಹೇಳಿಕೆ ತಿರಸ್ಕರಿಸಿದ ಬಿಜೆಪಿ

ಅಚ್ಚೆ ದಿನಗಳು ಬರುವುದಕ್ಕೆ 25 ವರ್ಷ ಕಾಯಬೇಕೆಂಬ ಅಮಿತ್ ಷಾ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಜೆಪಿಯು ಇದೀಗ ಅಮಿತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಗಳವಾರ ಹೇಳಿದೆ...

ಭೂಪಾಲ್: ಅಚ್ಚೆ ದಿನಗಳು ಬರುವುದಕ್ಕೆ 25 ವರ್ಷ ಕಾಯಬೇಕೆಂಬ ಅಮಿತ್ ಷಾ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಜೆಪಿಯು ಇದೀಗ ಅಮಿತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಗಳವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಿರ್ದೇಶಕ ಹಾಗೂ ಮಾಧ್ಯಮ ಉಸ್ತುವಾರಿ ಶ್ರೀಕಾಂತ್ ಶರ್ಮಾ ಅವರು, ಅಮಿತ್ ಅವರ ಹೇಳಿಕೆ ಕುರಿತಂತೆ ಪ್ರಕಟವಾಗುತ್ತಿರುವ ಸುದ್ದಿಗಳಲ್ಲಿ ತಿರುಳಿಲ್ಲ. ದೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಿ, ಉದ್ಯೋಗ ಸೃಷ್ಟಿಸಲು 5 ವರ್ಷಗಳ ಕಾಲಾವಕಾಶ ಬೇಕಿದ್ದು, ಮೇಕಿಂಗ್ ಇಂಡಿಯಾ ವಿಶ್ವ ಗುರು ಕನಸು ನನಸು ಮಾಡಲು 25 ವರ್ಷಗಳು ಬೇಕಾಗುತ್ತದೆ ಎಂಬ ಅರ್ಥದಲ್ಲಿ ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. 

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು, ಕೇವಲ 5 ವರ್ಷದ ಅವಧಿಯಲ್ಲಿ ಅಚ್ಚೆ ದೀನ್ ನೀಡಿ ಭಾರತವನ್ನು ವಿಶ್ವದ ನಂ.1 ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಒಳ್ಳೆಯ ದಿನಗಳೆಂಬುದು ಬ್ರಿಟೀಶ್ ಪೂರ್ವ ಆಡಳಿತವಿದ್ದ ಸಂದರ್ಭದಲ್ಲಿ ಭಾರತದ ಹೆಮ್ಮೆಯ ವಿಷಯವಾಗಿತ್ತು. 5 ವರ್ಷದ ಅಲ್ಪ ಅವಧಿಯಲ್ಲಿ ಅದನ್ನು ಮರಳಿ ತರಲು ಸಾಧ್ಯವಿಲ್ಲ.  ಪಂಚಾಯತ್ ನಿಂದ ಸಂಸತ್ ವರೆಗೂ ಬಿಜೆಪಿ ಅಧಿಕಾರದಲ್ಲಿದ್ದರೆ ಮಾತ್ರ ಒಳ್ಳೆಯ ದಿನಗಳು ಬಂದು ಭಾರತ ವಿಶ್ವದ ನಂ.1 ದೇಶವಾಗಲು ಸಾಧ್ಯ ಎಂದು ಹೇಳಿದ್ದರು. ಅಮಿತ್ ಶಾ ಅವರ ಈ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.ಅಚ್ಚೆ ದಿನಗಳು ಬರುವುದಕ್ಕೆ 25 ವರ್ಷ ಕಾಯಬೇಕೆಂಬ ಅಮಿತ್ ಷಾ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಜೆಪಿಯು ಇದೀಗ ಅಮಿತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಗಳವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಿರ್ದೇಶಕ ಹಾಗೂ ಮಾಧ್ಯಮ ಉಸ್ತುವಾರಿ ಶ್ರೀಕಾಂತ್ ಶರ್ಮಾ ಅವರು, ಅಮಿತ್ ಅವರ ಹೇಳಿಕೆ ಕುರಿತಂತೆ ಪ್ರಕಟವಾಗುತ್ತಿರುವ ಸುದ್ದಿಗಳಲ್ಲಿ ತಿರುಳಿಲ್ಲ. ದೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಿ, ಉದ್ಯೋಗ ಸೃಷ್ಟಿಸಲು 5 ವರ್ಷಗಳ ಕಾಲಾವಕಾಶ ಬೇಕಿದ್ದು, ಮೇಕಿಂಗ್ ಇಂಡಿಯಾ ವಿಶ್ವ ಗುರು ಕನಸು ನನಸು ಮಾಡಲು 25 ವರ್ಷಗಳು ಬೇಕಾಗುತ್ತದೆ ಎಂಬ ಅರ್ಥದಲ್ಲಿ ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.  

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು, ಕೇವಲ 5 ವರ್ಷದ ಅವಧಿಯಲ್ಲಿ ಅಚ್ಚೆ ದೀನ್ ನೀಡಿ ಭಾರತವನ್ನು ವಿಶ್ವದ ನಂ.1 ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಒಳ್ಳೆಯ ದಿನಗಳೆಂಬುದು ಬ್ರಿಟೀಶ್ ಪೂರ್ವ ಆಡಳಿತವಿದ್ದ ಸಂದರ್ಭದಲ್ಲಿ ಭಾರತದ ಹೆಮ್ಮೆಯ ವಿಷಯವಾಗಿತ್ತು. 5 ವರ್ಷದ ಅಲ್ಪ ಅವಧಿಯಲ್ಲಿ ಅದನ್ನು ಮರಳಿ ತರಲು ಸಾಧ್ಯವಿಲ್ಲ.  ಪಂಚಾಯತ್ ನಿಂದ ಸಂಸತ್ ವರೆಗೂ ಬಿಜೆಪಿ ಅಧಿಕಾರದಲ್ಲಿದ್ದರೆ ಮಾತ್ರ ಒಳ್ಳೆಯ ದಿನಗಳು ಬಂದು ಭಾರತ ವಿಶ್ವದ ನಂ.1 ದೇಶವಾಗಲು ಸಾಧ್ಯ ಎಂದು ಹೇಳಿದ್ದರು. ಅಮಿತ್ ಶಾ ಅವರ ಈ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

Related Stories

No stories found.

Advertisement

X
Kannada Prabha
www.kannadaprabha.com