`ಗಗನ'ಚುಂಬಿ ವಿಮಾನಯಾನ

ವಿಮಾನಯಾನ ನ್ಯಾವಿಗೇಷನ್ ವ್ಯವಸ್ಥೆ ಗಗನ್‍ಗೆ ಸೋಮವಾರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಚಾಲನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಮಾನಯಾನ ನ್ಯಾವಿಗೇಷನ್ ವ್ಯವಸ್ಥೆ ಗಗನ್‍ಗೆ ಸೋಮವಾರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಚಾಲನೆ ನೀಡಿದ್ದಾರೆ. ವಿಮಾನಗಳ ದಕ್ಷ ಕಾರ್ಯನಿರ್ವಹಣೆ, ಇಂಧನ ವೆಚ್ಚ ಕಡಿತ, ಇಂಧನ ದಕ್ಷತೆ, ವಿಮಾನಯಾನ ಸುರಕ್ಷತೆಗೆ ಈ ಜಿಪಿಎಸ್ ಏಡೆಡ್ ಜಿಯೋ ಆಗ್ಮೆಂಟೆಡ್ ನ್ಯಾವಿಗೇ ಷನ್(ಗಗನ್) ವ್ಯವಸ್ಥೆ ಸಕಹಾಯವಾ ಗಲಿದೆ. ಇಸ್ರೋ ಹಾಗೂ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರವು ಜಂಟಿಯಾಗಿ ರು.774 ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆ ಅಭಿವೃದ್ಧಿಪಡಿಸಿವೆ.
ಗಗನ್ ಅನುಕೂಲತೆಗಳೇನು?
- ಗಗನ್ ಜಿಪಿಎಸ್ ಸಿಗ್ನಲ್‍ಗಳಲ್ಲಿನ ಅಡೆತಡೆ ಕಡಿಮೆ ಮಾಡಿ, ವಿಮಾನದ ಅಕ್ಷಾಂಶ, ರೇಖಾಂಶ, ಎತ್ತರ, ವೇಗ ಇತ್ಯಾದಿಗಳ ಸ್ಪಷ್ಟ ಮಾಹಿತಿ ನೀಡುತ್ತದೆ
- ದಕ್ಷ ದಿಶಾದರ್ಶನ ಹಾಗೂ ಹತ್ತಿರದ ಮಾರ್ಗ ಸೂಚಿಸುತ್ತವೆ. ಈ ಮೂಲಕ ಇಂಧನ ವೆಚ್ಚ ಕಡಿಮೆಮಾಡುತ್ತದೆ
- ಗಗನ್ ಭಾರತ, ಬಂಗಾಳಕೊಲ್ಲಿ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯದಿಂದ ಆಫ್ರಿಕಾವರೆಗೂ ಜಿಪಿಎಸ್‍ಗೆ ವೇಗದ ಸೇವೆ ಒದಗಿಸುತ್ತದೆ
- ಈವರೆಗೆ ಅಮೆರಿಕ, ಜಪಾನ್, ಯುರೋಪ್‍ನಲ್ಲಿ ಮಾತ್ರವೇ ಈ ವ್ಯವಸ್ಥೆಯಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com