
ನವದೆಹಲಿ: ವ್ಯಾಪಂ ಹಗರಣದ ಪ್ರಮುಖ ಆರೋಪಿಗಳಿಂದ ಹಣ ಪಡೆದಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ತಳ್ಳಿಹಾಕಿದ್ದಾರೆ.
2010ರಲ್ಲಿ ಭೂಪಾಲ್ ಗೆ ಭೇಟಿಯ ವಿಮಾನ ಪ್ರಯಾಣ ಟಿಕೆಟ್ ಗಳನ್ನು ಸುಧೀರ್ ಶರ್ಮಾ ಮಾಡಿಸಿದ್ದರು ಎಂದು ಕಾಂಗ್ರೆಸ್ ದೂರಿತ್ತು. ಈ ಆರೋಪವನ್ನು ತಳ್ಳಿ ಹಾಕಿರುವ ಪ್ರಧಾನ್ ನನ್ನ ಭೂಪಾಲ್ ಪ್ರವಾಸದ ಟಿಕೆಟ್ ಗಳನ್ನು ನನ್ನ ಪಕ್ಷ ನೀಡಿತ್ತು ಎಂದು ಹೇಳಿದ್ದಾರೆ.
ಯಾರಿಂದಲೂ ನಾನು ಟಿಕೆಟ್ ಗಳನ್ನು ತೆಗೆದುಕೊಂಡಿಲ್ಲ. ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳೇ ನಮ್ಮ ಟಿಕೆಟ್ ಗಳನ್ನು ಬುಕ್ ಮಾಡಿದ್ದರು ಎಂದು ಹೇಳಿದ್ದಾರೆ.
ವ್ಯಾಪಂ ಹಗರಣದ ಕಿಂಗ್ ಪಿನ್ ಸುಧೀರ್ ಶರ್ಮಾ ಮತ್ತು ಲಕ್ಷ್ಮಿಕಾಂತ್ ಶರ್ಮಾ ಅವರು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ರೊಂದಿಗೆ ಹಣವನ್ನು ಪಾಲು ಮಾಡಿಕೊಂಡಿದ್ದಾರೆ. ಅಲ್ಲದೆ ಧಮೇಂದ್ರ ಪ್ರಧಾನ್ ರ ವಿಮಾನ ಪ್ರಯಾಣದ ವೆಚ್ಚವನ್ನು ಸುಧೀರ್ ಶರ್ಮಾ ಭರಿಸಿರುವುದಾಗಿ ಕಾಂಗ್ರೆಸ್ ಆರೋಪಿಸಿತ್ತು.
Advertisement