ಭೂ ಸ್ವಾಧೀನ ಕಾಯ್ದೆ- ಒಪ್ಪಿಗೆ ಸೂಚಿಸಿದವರಿಂದಲೇ ವಿರೋಧ: ಕೇಂದ್ರ

ವಿವಾದ ಸೃಷ್ಟಿಸಿರುವ ಕೇಂದ್ರ ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಈ ಮೊದಲು ಒಪ್ಪಿಗೆ ಸೂಚಿದ್ದ ಸಚಿವರೇ ಇದೀಗ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ...
ನೀತಿ ಆಯೋಗ ಸಭೆ (ಸಾಂದರ್ಭಿಕ ಚಿತ್ರ)
ನೀತಿ ಆಯೋಗ ಸಭೆ (ಸಾಂದರ್ಭಿಕ ಚಿತ್ರ)

ನವದೆಹಲಿ: ವಿವಾದ ಸೃಷ್ಟಿಸಿರುವ ಕೇಂದ್ರ ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಈ ಮೊದಲು ಒಪ್ಪಿಗೆ ಸೂಚಿದ್ದ ಸಚಿವರೇ ಇದೀಗ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಈ ಕುರಿತಂತೆ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ಇಂದು ನಡೆದ ನೀತಿ ಆಯೋಗ ಸಭೆಯಲ್ಲಿ ಮಾತನಾಡಿರುವ ಸಚಿವರು, ಎನ್ ಡಿಎ ನೇತೃತ್ವದ ಸರ್ಕಾರದ ವಿವಾದಿತ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ಇದೀಗ ವಿರೋಧ ವ್ಯಕ್ತಪಡಿಸುತ್ತಿರುವವರು ಈ ಹಿಂದೆ ಒಪ್ಪಿಗೆ ಸೂಚಿಸಿದ್ದರು. ಪ್ರಸ್ತುತ ಭೂ ಸ್ವಾಧೀನ ಕಾಯ್ದೆ ಅಭಿವೃದ್ಧಿಗೆ ಈಗಾಗಲೇ ತಡವಾಗಿದ್ದು, ಕೂಡಲೇ ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ನೀತಿ ಆಯೋಗ ಸಭೆಯಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕುರಿತಂತೆ ಚರ್ಚೆ ನಡೆಸಲಾಯಿತು. ಭೂಸ್ವಾಧೀನ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಂತ್ರಿಗಳು ನೀತಿ ಆಯೋಗ ಸಭೆಗೆ ಬರಬೇಕಿತ್ತು. ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿರುವವರು ಸಭೆಯಲ್ಲಿ ತಮಗೆ ವಿರೋಧ ಎನಿಸಿರುವ ಪ್ರಮುಖ ಅಂಶಗಳನ್ನು ಚರ್ಚಿಸಬೇಕಿತ್ತು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಇದೇ ವೇಳೆ ಭೂ ಸ್ವಾಧೀನ ಕಾಯ್ದೆ ಕುರಿತಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಲುವು ಕುರಿತಂತೆ ಮಾತನಾಡಿರುವ ಅವರು, ಹೊಸ ಕಾಯ್ದೆ ಜಾರಿಗೆ ತರಲು ಇದು ಸರಿಯಾದ ಸಮಯವಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇತ್ತ ಕೇಜ್ರಿವಾಲ್ ಅವರು  ಹೊಸ ಕಾಯ್ದೆ ತರುವ ಬದಲು, ಇರುವ ಕಾಯ್ದೆಯನ್ನೇ ಮಾರ್ಪಾಡು ಮಾಡುವಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭೂಮಿ ಬಗ್ಗೆ ಚಿಂತನೆ ಇರುವುದರಿಂದಲೇ ಇದೀಗ ರಾಜ್ಯಗಳ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. ರಾಜ್ಯದ ಮುಖ್ಯಮಂತ್ರಿಗಳು ಭೂ ಕಾಯ್ದೆ ಮಸೂದೆ ಅನುಷ್ಠಾನಗೊಳಿಸಲು ತಡ ಮಾಡುತ್ತಿದ್ದಾರೆ. ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಎಲ್ಲಾ ರಾಜ್ಯಗಳು ಎಷ್ಟು ವೇಗವಾಗುತ್ತದೆಯೋ ಅಷ್ಟು ವೇಗವಾಗಿ ಹೊಸ ಶಾಸನವನ್ನು ಜಾರಿಗೆ ತರಬಹುದು. ಶೀಘ್ರದಲ್ಲೇ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕುರಿತಂತೆ ಅಭಿಪ್ರಾಯ ಸಂಗ್ರಹಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗ ಸಭೆ ಇಂದು ನವದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೋದಿ ಅವರ ನಿವಾಸದಲ್ಲಿ ನಡೆದಿದ್ದು, ಸಭೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜ ಸೇರಿದಂತೆ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿನ ಎಲ್ಲಾ ಸಿಎಂಗಳು ಗೈರು ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com