ಗುರುತಿನ ಚೀಟಿ ನೀಡದೇ ತತ್ಕಾಲ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಶೀಘ್ರವೇ ಜಾರಿ
ನವದೆಹಲಿ: ಪ್ರಯಾಣಿಕರು ಗುರುತಿನ ಚಿಟಿ ಇಲ್ಲದೇ ತತ್ಕಾಲ್ ಟಿಕೆಟ್ ಬುಕ್ ಮಾಡುವ ಸೌಲಭ್ಯ ಶೀಘ್ರವೇ ಜಾರಿಗೆ ಬರಲಿದೆ.
ಗುರುತಿನ ಚೀಟಿ ಬದಲಿಗೆ, ಫೋಟೋ ಇರುವ ರಾಷ್ಟ್ರೀಕೃತ ಬ್ಯಾಂಕ್ ನ ಪಾಸ್ ಬುಕ್, ಬ್ಯಾಂಕ್ ಕ್ರೆಡಿಟ್ ಕಾರ್ಡ್ ನ್ನೂ ಅಂಗೀಕರಿಸಲಾಗುತ್ತದೆ. ಪ್ರಯಾಣದ ಹಿಂದಿನ ದಿನ ತತ್ಕಾಲ್ ಟಿಕೆಟ್ ಕಾದಿರಿಸುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಟಿಕೆಟ್ ಕಾದಿರಿಸುವಿಕೆ ವೇಳೆ ಪ್ರಯಾಣಿಕರು ಯಾವ ಗುರುತಿನ ಚೀಟಿಯನ್ನು ನೀಡಿರುತ್ತಾರೆಯೋ ಅದೇ ಗುರುತಿನ ಚೀಟಿಯನ್ನು ಪ್ರಯಾಣದ ವೇಳೆಯೂ ನೀಡಬೇಕಿರುತ್ತದೆ. ಬೇರೆ ಐಡಿಯನ್ನು ತೋರಿಸಿದರೆ ಟಿಟಿಇ ದಂಡ ವಿಧಿಸುತ್ತಾರೆ.
ಹಲವು ಪ್ರಯಾಣಿಕರು ಟಿಕೆಟ್ ಕಾಡಿಸುವ ಸಂದರ್ಭದಲ್ಲಿ ನೀಡಿದ್ದ ಗುರುತಿನ ಪುರಾವೆಯನ್ನೇ ಪ್ರಯಾಣದ ಸಂದರ್ಭದಲ್ಲೂ ಹೊಂದಿರುವುದಿಲ್ಲ, ಆದ್ದರಿಂದ ಪ್ರಯಾಣಿಕರಿಗೆ ದಂಡವಿಧಿಸಲಾಗುತ್ತಿದೆ. ಆದರೆ ಇನ್ನು ಮುಂದೆ ವಾಹನ ಪರವಾನಗಿ, ಮತದಾರರ ಗುರುತಿನ ಚೀಟಿ ಸೇರಿದಂತೆ 10 ಮಾದರಿಯ ಗುರುತಿನ ಚೀಟಿಯಲ್ಲಿ ಯಾವುದನ್ನಾದರೂ ಟಿಕೆಟ್ ಬುಕಿಂಗ್ ವೇಳೆ ನೀಡಬಹುದಾಗಿದೆ, ಅಂತೆಯೇ ಪರಿಶೀಲನೆ ವೇಳೆಯಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ಟಿ.ಟಿ.ಇ ಗೆ ನೀಡಬಹುದಾಗಿದೆ.
ಐಡಿ ಇಲ್ಲದೇ ತತ್ಕಾಲ್ ಟಿಕೆಟ್ ಕಾಯ್ದಿರಿಸುವ ಸಾಧ್ಯವಾಗುವಂತೆ ಸಾಫ್ಟ್ ವೇರ್ ನಲ್ಲಿ ಬದಲಾವಣೆ ಮಾಡಲು ರೈಲ್ವೆ ಇಲಾಖೆ, ಐಟಿ ವಿಭಾಗಕ್ಕೆ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 1 ರಿಂದ ಹೊಸ ನೀತಿ ಜಾರಿಗೆ ಬರಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ