ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಮೋದಿಯ 56 ಇಂಚಿನ ಎದೆ ಶೀಘ್ರವೇ 5.6 ಇಂಚಿಗೆ ಕುಗ್ಗಲಿದೆ: ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆ ಶೀಘ್ರವೇ 5.6 ಇಂಚಿಗೆ ಕುಗ್ಗಲಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ...

ರಾಜಸ್ತಾನ: 2 ದಿನದ ರಾಜಸ್ತಾನ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಜೈಪುರದಲ್ಲಿ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 10 ಕಿ.ಮೀ ಪಾದಯಾತ್ರೆ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಭಾಷಣದುದ್ಧಕ್ಕೂ ಪ್ರಧಾನಿ ಮೋದಿ ಮತ್ತು ರಾಜಸ್ತಾನದ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.

ರಾಜಸ್ತಾನದಲ್ಲಿರುವುದು ವಸುಂದರಾ ರಾಜೇ ಸರ್ಕಾರವಲ್ಲ. ಇಲ್ಲಿರುವುದು ಲಲಿತ್ ಮೋದಿ ಸರ್ಕಾರ ಎಂದರು. ಲಂಡನ್ ನಲ್ಲಿ ಸರ್ಕಾರದ ರಿಮೋಟ್ ಇದೆ. ಲಲಿತ್ ಮೋದಿ ಅಲ್ಲಿಂದ ಬಟನ್ ಒತ್ತಿದರೆ ಇಲ್ಲಿ ವಸುಂದರಾ ರಾಜೇ ಜಂಪ್ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ದೇಶದ ಕಾನೂನನ್ನು ವಸುಂದರಾ ರಾಜೇ ಮುರಿದಿದ್ದಾರೆ.

ಸಂಸತ್ತಿನಲ್ಲಿ ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಸೂದೆ ಅಂಗೀಕಾರವಾಗಲು ಬಿಡುವುದಿಲ್ಲ ಎಂದ ರಾಹುಲ್ ಗಾಂಧಿ, ಕಾಂಗ್ರೆಸ್ ದೇಶದ ಶಕ್ತಿಯಾಗಿದೆ. ಈ ಹಿಂದೆ ಅಶೋಕ್ ಗೆಹ್ಲೋಟ್ ಸರ್ಕಾರ ಇದ್ದಾಗ ಬಡಜನರಿಗೆ ಉಚಿತ ಔಷಧಿ ನೀಡಲಾಗುತ್ತಿತ್ತು. ಆದರೆ ಈಗಿನ ಸರ್ಕಾರ ಇರುವ ಆಸ್ಪತ್ರೆಗಳನ್ನು ಮುಚ್ಚಿಸುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆ ಶೀಘ್ರವೇ 5.6 ಇಂಚಿಗೆ ಕುಗ್ಗಲಿದೆ ಎಂದು ಟೀಕಿಸಿದರು.

ಮೋದಿ ಸರ್ಕಾರದಲ್ಲಿರುವ ಸಚಿವರು ಬರಿ ಪ್ರದರ್ಶನಕ್ಕೆ ಮಾತ್ರ ಇರುವುದು. ಮೋದಿಯೇ ಎಲ್ಲಾದಕ್ಕೂ ಮಂತ್ರಿ ಎಂದು ಹೇಳಿದ ಅವರು ಕಾಂಗ್ರೆಸ್ ನಲ್ಲಿ ಅನುಭವಿ ರಾಜಕಾರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇನ್ಯಾವ ಪಕ್ಷದಲ್ಲೂ ಇಷ್ಟು ಸಂಖ್ಯೆಯ ಅನುಭವಿ ರಾಜಕಾರಣಿಗಳು ಇಲ್ಲ ಎಂದು ರಾಹುಲ್ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com