
ಹರ್ಯಾಣ: ಹರ್ಯಾಣದಲ್ಲಿ ವಿವಾಹಿತ ಜೋಡಿಗೆ ಖಾಪ್ ಪಂಚಾಯಿತಿಯಿಂದ ಸಂಕಷ್ಟ ಒದಗಿ ಬಂದಿದೆ. ಐದು ತಿಂಗಳ ಹಿಂದೆ ವಿವಾಹವಾಗಿದ್ದ ನವಜೋಡಿಯ ಸಂಬಂಧ ಅಕ್ರಮವೆಂದು ಘೋಷಿಸಿರುವ ಖಾಪ್ ಪಂಚಾಯತಿ ಇಬ್ಬರು ಸಹೋದರ-ಸಹೋದರಿಯಂತೆ ಬದುಕಬೇಕು ಎಂದು ತಿಳಿಸುವ ಮೂಲಕ ನವಜೋಡಿಗೆ ಆಘಾತ ನೀಡಿದೆ.
25 ವರ್ಷದ ಪ್ರವೀಣ್ ಕುಮಾರ್ ಹಾಗೂ 30 ವರ್ಷದ ಪೂನಮ್ ಗೆ ಕಳೆದ 5 ತಿಂಗಳ ಹಿಂದೆ ಮನೆಯವರೇ ಒಪ್ಪಿ ಮದುವೆ ಮಾಡಿದ್ದರು. ಇದಾದ ನಂತರ ಹರ್ಯಾಣದ ಪಂಚಾಯ್ತಿ ನ್ಯಾಯಾಲಯ ಇವರಿಬ್ಬರ ಕುಟುಂಬದ್ದೂ ಒಂದೇ ಗೋತ್ರವಾಗಿದೆ. ಬಾಯಿಚಾರ ವರ್ಗಕ್ಕೆ ಸೇರಿದ ಗೋತ್ರವಾಗಿರುವುದರಿಂದ ಇವರಿಬ್ಬರು ದಂಪತಿಯಲ್ಲ. ಅಣ್ಣತಂಗಿಯಂತೆ ಜೀವನ ನಡೆಸಬೇಕು ಎಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ದಂಪತಿಗಳು ತಮಗೆ ರಕ್ಷಣೆ ನೀಡಬೇಕೆಂದು ಕೋರಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ. ಇಂದು ಹೈಕೋರ್ಟ್ ನಲ್ಲಿ ದಂಪತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.
Advertisement