ಕುಂಭಮೇಳದ ರಾಯಲ್ ಬಾತ್ ನಲ್ಲಿ ವಿಐಪಿಗಳಿಗೆ ವಿಶೇಷ ಆತಿಥ್ಯವಿಲ್ಲ

ನಾಸಿಕ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ರಾಯಲ್ ಬಾತ್ ನಲ್ಲಿ ಗಣ್ಯರಿಗೆ, ಅತಿ ಗಣ್ಯರಿಗೆ ಯಾವುದೇ ವಿಶೇಷ ಅತಿಥಿ ಸತ್ಕಾರವಿರುವುದಿಲ್ಲ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬಯಿ: ನಾಸಿಕ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ರಾಯಲ್ ಬಾತ್ ನಲ್ಲಿ ಗಣ್ಯರಿಗೆ, ಅತಿ ಗಣ್ಯರಿಗೆ ಯಾವುದೇ ವಿಶೇಷ ಅತಿಥಿ ಸತ್ಕಾರವಿರುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಂಭಮೇಳಗ ಭಾಗವಾದ ರಾಯಲ್ ಬಾತ್ ನಲ್ಲಿ ಭಾಗವಹಿಸಲು ಆಹ್ವಾನ ನೀಡಿದಾಗ,  ಯಾವುದೇ ವಿಐಪಿ, ಅಥವಾ ವಿವಿಐಪಿಗಳಿಗೆ ಈ ಅವಧಿಯಲ್ಲಿ ವಿಶೇಷ ಮಾನ್ಯತೆ ನೀಡುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಅದರಂತೆ ಭಕ್ತಾದಿಗಳಿಗೆ ಯಾವುದೇ ಅನಾನುಕೂಲತೆ ಆಗದಂತೆ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.

ರಾಯಲ್ ಬಾತ್ ವೇಳೆ ಕೋಟ್ಯಾಂತರ ಭಕ್ತಾದಿಗಳು ಭಾಗವಹಿಸುತ್ತಾರೆ. ಅವರಿಗೆ ಯಾವುದೇ ರೀತಿಯ ಕಾನೂನು ತೊಡಕಾಗದಂತೆ ನೋಡಿಕೊಳ್ಳಲು ಗಣ್ಯರ ಸತ್ಕಾರ ವನ್ನು ಈ ವೇಳೆ ನಿಷೇಧಿಸಲಾಗಿದೆ ಎಂದರು.

ಮಹಾರಾಷ್ಟ್ರ ಸರ್ಕಾರ ಬರುವ ಭಕ್ತ ಗಣಕ್ಕೆ ಎಲ್ಲಾ ಅನುಕೂಲ ಕಲ್ಪಿಸಿದ್ದು, ಮಹಿಳಾ ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಇನ್ನು ಸರಿಯಾದ ಸಮಯಕ್ಕೆ ನಾಸಿಕ್ ಗೆ ಆಹಾರ ಧಾನ್ಯಗಳು ತಲುಪದಿರುವ ಬಗ್ಗೆ ತನಿಖೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com