
ನವದೆಹಲಿ: ಭಾರತದ ನಗರ ಪ್ರದೇಶದ ಶೇ.35ರಷ್ಟು ಮಂದಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಬದುಕುತ್ತಿದ್ದಾರೆ ಎಂದು ಮೊದಲ ನಗರ ಸಾಮಾಜಿಕ ಆರ್ಥಿಕ ಮತ್ತು
ಜಾತಿ ಗಣತಿ(ಎಸ್‍ಇಸಿಸಿ)ಯ ಬಿಡುಗಡೆಯಾಗದ ವರದಿ ಹೇಳಿದೆ. ಅಂದರೆ, ಸಮೀಕ್ಷೆಗೊಳ ಪಟ್ಟ 4,041 ನಗರಗಳು ಮತ್ತು ಪಟ್ಟಣಗಳ ಒಟ್ಟು 6.30 ಕೋಟಿ ಕುಟುಂಬಗಳ ಪೈಕಿ
2.20 ಕೋಟಿ ಕುಟುಂಬಗಳು ಬಿಪಿಎಲ್ ವ್ಯಾಪ್ತಿಯಲ್ಲಿವೆ.ಯೋಜನಾ ಆಯೋಗದ ಮಾಜಿ ಸದಸ್ಯ ಎಸ್.ಆರ್. ಹಾಶಿಮ್ ಅವರು ರೂಪಿಸಿದ
ಬಿಪಿಎಲ್ ಮಾನದಂಡದ ಅನ್ವಯ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಗಣತಿ ಹೇಳುವಂತೆ, ಅತಿಹೆಚ್ಚು ನಗರ ಬಿಪಿಎಲ್ ಕುಟುಂಬಗಳಿರುವುದು ಈಶಾನ್ಯ ರಾಜ್ಯಗ
ಳಲ್ಲಿ. ಮಣಿಪುರದಲ್ಲಿ ಒಟ್ಟು ಜನಸಂಖ್ಯೆಯ ಶೇ.54.95, ಮಿಜೋರಾಂನಲ್ಲಿ ಶೇ.52.35 ಮತ್ತು ಬಿಹಾರದಲ್ಲಿ ಶೇ.49.82ರಷ್ಟು ಮಂದಿ ಈ ಗುಂಪಿಗೆ ಸೇರಿದ್ದಾರೆ. ಇದೇ ವೇಳೆ, ಅತಿ ಕಡಿಮೆ ಬಿಪಿಎಲ್ ಕುಟುಂಬಗಳಿರುವುದು ಗೋವಾ(ಶೇ.16), ದಾದ್ರಾ ಮತ್ತು ನಗರ ಹವೇರಿ(ಶೇ.18) ಹಾಗೂ ದೆಹಲಿ(ಶೇ.18) ಯಲ್ಲಿ ಎಂದೂ ವರದಿ ಹೇಳಿದೆ. 2011-12ರಲ್ಲಿ ರಂಗರಾಜನ್ ಸಮಿತಿಯ ಮಾನದಂಡದಲ್ಲಿ ತಯಾರಿಸಲಾದ ವರದಿಯು ದೇಶದ ನಗರಪ್ರದೇಶಗಳಲ್ಲಿ ಶೇ.26.4ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿವರು ಎಂದು ಹೇಳಿತ್ತು. ತೆಂಡೂಲ್ಕರ್ ಸಮಿತಿಯು ಈ ಸಂಖ್ಯೆಯನ್ನು ಶೇ.13.7 ಎಂದಿತ್ತು. ಏತನ್ಮಧ್ಯೆ, ಪ್ರಸಕ್ತ ತಿಂಗಳಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ಎಸ್‍ಇಸಿಸಿ ವರದಿಯು, ಗ್ರಾಮೀಣ ಭಾರತದಲ್ಲಿರುವ ಶೇ.74ರಷ್ಟು ಕುಟುಂಬಗಳು ತಿಂಗಳಿಗೆ ರು. 5 ಸಾವಿರಕ್ಕಿಂತಲೂ ಕಡಿಮೆ ಆದಾಯದಲ್ಲಿ ಬದುಕುತ್ತಿದೆ ಎಂದಿದೆ ಎಂದು ದಿ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
Advertisement